• 17 February 2019 13:32
Jai Kannada
Jai Kannada
Blog single photo
December 31, 2017

ಟೀಂ ಇಂಡಿಯಾಗೆ ಆಫ್ರಿಕಾ ನೆಲದಲ್ಲಿ ಅಗ್ನಿಪರೀಕ್ಷೆ 

ಟೀಂ ಇಂಡಿಯಾ ಆಫ್ರಿಕಾ ನೆಲದಲ್ಲೂ ಇತಿಹಾಸ ನಿರ್ಮಿಸುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಆಫ್ರಿಕಾ ನೆಲದಲ್ಲಿ ಗೆಲ್ಲಬೇಕೆನ್ನುವುದು 25 ವರ್ಷಗಳಿಂದ ಕಾಣುತ್ತಿರುವ ಕನಸು. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ ದ.ಆಫ್ರಿಕಾ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹರಿಣಗಳ ನೆಲದಲ್ಲಿ ಟೀಂ ಇಂಡಿಯಾ ಕಳೆದ 25 ವರ್ಷಗಳಿಂದ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಆಫ್ರಿಕಾ ನೆಲದಲ್ಲಿ 6 ಟೆಸ್ಟ್ ಸರಣಿ ಆಡಿದ್ದು, ಕೆಲವು ಡ್ರಾ ಮಾಡಿಕೊಂಡಿದ್ದರೂ ಒಂದೇ ಒಂದು ಸರಣಿಯಲ್ಲಿ ಗೆದ್ದಿಲ್ಲ.

ವಿರಾಟ್ ಕೊಹ್ಲಿ  ಟೀಂ ಇಂಡಿಯಾದ ಮೂರು ಫಾರ್ಮಾಟ್ ನಾಯಕರಾಗಿ ಯಶಸ್ವಿ ನಾಯಕರೆನಿಸಿದ್ದಾರೆ ನಿಜ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆಂಬ ಕೋಟಿ ಕೋಟಿ ಭಾರತೀಯರ ಕನಸನ್ನು ನನಸು ಮಾಡುತ್ತಾರಾ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಗೆಲುವು ಗಳಿಸುವುದು ಟೀಂ ಇಂಡಿಯಾಕ್ಕೆ ಇದುವರೆಗೆ ಕಬ್ಬಿಣದ ಕಡಲೆಯಾಗಿತ್ತು. ಆದರೆ ಈ ಬಾರಿ ಕೊಹ್ಲಿ ಬಾಯ್ಸ್ ಈ ಸಾಧನೆ ಮಾಡಿ ಟೀಂ ಇಂಡಿಯಾಗೆ ಗೌರವ ತಂದುಕೊಡುತ್ತಾರಾ ಕಾದು ನೋಡಬೇಕು.


 

Recent Comments

Leave Comments

footer
Top