• 18 November 2018 13:47
Jai Kannada
Jai Kannada
Blog single photo
December 31, 2017

ಶಿಖರ್ ಧವನ್ ಗಾಯಗೊಂಡಿದ್ದು ಹೇಗೆ?

ನವದೆಹಲಿ:  ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗುತ್ತಿಲ್ಲ. ಅದಕ್ಕೆ ಕಾರಣ ಕಾಲಿಗೆ ಗಾಯವಾಗಿರುವುದು. ಅವರ ಕಾಲಿಗೆ ಗಾಯವಾಗಿದ್ದು, ಯಾವುದೇ ಕ್ರಿಕೆಟ್ ಆಟದಲ್ಲಲ್ಲ. ಬದಲಾಗಿ ಪಾರ್ಟಿಗೆ ಹೋಗಿದ್ದ ಧವನ್ ಕುಣಿಯುತ್ತಿದ್ದಾಗ ಕೆಳಗೆ ಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದರು.

ಆದರೆ ಧವನ್ ಅದೇ ಗಾಯವನ್ನಿಟ್ಟುಕೊಂಡು ಮತ್ತೊಂದು ಪಾರ್ಟಿಗೆ ತೆರಳಿ ಅಲ್ಲೂ ಕುಣಿದಿದ್ದರಿಂದ ಅವರ ನೋವು ಹೆಚ್ಚಾಗಿ ಸರಿಯಾಗಿ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳಿಗೆ ಆಡಿಸದೇ ವಿರಾಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಧವನ್ ಗಾಯವಾಗಿದ್ದು, ಒಂದು ರೀತಿಯಲ್ಲಿ ರಾಹುಲ್ ಅವರಿಗೆ ಅವಕಾಶ ಸಿಗುವಂತಾಗಿ ಧವನ್‌ಗೆ ರಾಹುಲ್ ಥ್ಯಾಂಕ್ಸ್ ಹೇಳಿರಬಹುದು.

Recent Comments

Leave Comments

footer
Top