ಮುಂಬೈ: ಬಾಲಿವುಡ್ ಜಗತ್ತಿನ ಮಾದಕ ನಟಿ ಸನ್ನಿ ಲಿಯೋನ್ ಮೇಲೆ ಶೂಟಿಂಗ್ ಸೆಟ್ನಲ್ಲಿ ರಜನಿ ಎಂಬವರು ಹಾವನ್ನು ಬಿಟ್ಟು ಸನ್ನಿ ಬೆಚ್ಚಿಬೀಳುವಂತೆ ಮಾಡಿದ್ದರು. ಹಾವು ಕಂಡ ಸನ್ನಿ ಭಯದಿಂದ ಕೂಗಿ ನಂತರ ರಜನಿಯನ್ನು ಸೆಟ್ನಲ್ಲೇ ಅಟ್ಟಿಸಿಕೊಂಡು ಹೋಗಿದ್ದರು.
ಇದನ್ನು ಸನ್ನಿ ಇನ್ಸ್ಟಾಗ್ರಾಂನಲ್ಲಿ ಹಾಕಿ ತನ್ನ ಟೀಂನವರು ತಮಾಷೆ ಮಾಡಿದ್ದನ್ನು ಬಣ್ಣಿಸಿದ್ದರು. ಇದೆಲ್ಲಾ ನಡೆದ ಮೇಲೆ ಸನ್ನಿಗೆ ತನಗೆ ಬೆಚ್ಚಿಬೀಳಿಸಿದ ವ್ಯಕ್ತಿಯ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದರು. ಅದೇ ಸೆಟ್ನಲ್ಲಿ ಚಾಕ್ಲೇಟ್ ಕೇಕ್ ಹಿಡಿದಿದ್ದ ಸನ್ನಿ ರಜನಿ ಕಿವಿಗೆ ಅಪ್ಪಳಿಸಿದ್ದಳು.
ರಜನಿ ಕೈಯಲ್ಲಿ ಹಿಡಿದಿದ್ದ ಚಿತ್ರದ ಸ್ಕ್ರಿಪ್ಟ್ ಎಸೆದು ಅವಳನ್ನು ಬೆನ್ನಟ್ಟಿಕೊಂಡು ಹೋಗಿದ್ದ. ಈ ವಿಡಿಯೊವನ್ನು ಟ್ವಿಟ್ಟರ್ನಲ್ಲಿ ಹಾಕಿದ್ದ ಸನ್ನಿ ನನ್ನ ಸಹವಾಸಕ್ಕೆ ಬಂದರೆ ಇದೇ ಗತಿ ಎಂದು ಬರೆದಿದ್ದಾಳೆ.
Recent Comments