• 20 January 2018 12:52
Jai Kannada
Jai Kannada
Blog single photo
December 25, 2017

ಸೂಪರ್  ಸ್ಟಾರ್ ರಜನಿ ರಾಜಕೀಯಕ್ಕೆ ಡಿ. 31ರಂದು ಘೋಷಣೆ 

ಚೆನ್ನೈ:  ಸೂಪರ್ ಸ್ಟಾರ್ ರಜನಿಕಾಂತ್ ಟಿ. ನಗರದ ರಾಘವೇಂದ್ರ ಹಾಲ್ ಕಲ್ಯಾಣಮಂಟದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ತಾವು ಚಿತ್ರರಂಗ ಸೇರುವ ಕುರಿತು ತಮ್ಮ ಮನಸ್ಸಿನ ಭಾವನೆಗಳನ್ನು ಬಿಚ್ಚಿಟ್ಟರು. ಹೊಸ ವರ್ಷಕ್ಕೆ ರಜನಿ ಹೊಸ ಪಕ್ಷ ಉದಯವಾಗುತ್ತಾ ಎಂಬ ಕಾತುರದಲ್ಲಿ ಅವರ ಅಭಿಮಾನಿಗಳಿದ್ದಾರೆ.

6 ದಿನಗಳ ಈ ಸರಣಿ ಸಭೆಯಲ್ಲಿ ರಜನಿಕಾಂತ್ ರಾಜಕಾರಣಕ್ಕೆ ಸೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿಸಿದೆ. 1989ರಲ್ಲಿ ಎಂಜಿಆರ್ ಮರಣದ ನಂತರ ರಜನಿ ರಾಜಕೀಯಕ್ಕೆ ಬರಬೇಕೆಂದು ಕೆಲವರು ಸೂಚಿಸಿದ್ದರು. ಆದರೆ ರಜನಿ ಆಗ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಜಯಲಲಿತಾ ಮರಣದ ನಂತರ ರಜನಿ ರಾಜಕೀಯ ಸೇರುವ ಸುದ್ದಿ ಗರಿಗೆದರಿದೆ.

ರಜನಿಕಾಂತ್ ಹಿಮಾಲಯದ ಬಾಬಾ ಮುದ್ರೆಯ ಹಿನ್ನೆಲೆಯಲ್ಲಿ ಸಭೆಯಲ್ಲಿ ಕುಳಿತಿದ್ದು ಅಭಿಮಾನಿಗಳೊಂದಿಗೆ ರಜನಿಕಾಂತ್ ಸಭೆ ಆರಂಭವಾಯಿತು. ಮೊದ ಮೊದಲು ನಾನು ಚಿತ್ರಕ್ಕೆ 30 ಸಾವಿರ ಸಂಭಾವನೆ ಪಡೆಯುತ್ತಿದ್ದೆ ಎಂದು ರಜನಿಕಾಂತ್ ತಮ್ಮ ಗತ ಜೀವನವನ್ನು ಮೆಲಕು ಹಾಕಿದರು.. ರಜನಿ ಸ್ಟೈಲ್ ಎಂದು ಪರಿಚಯಿಸಿದ್ದು ನಿರ್ದೇಶಕ ಮಹೇಂದ್ರ ಸರ್ ಎಂದು ರಜನಿ ಅಭಿಮಾನದಿಂದ ಹೇಳಿದರು.ಅವರ ಪ್ರೋತ್ಸಾಹವನ್ನು, ಅಭಿಮಾನವನ್ನು ನೆನಪಿಸಿಕೊಂಡರು

. ನಾನು ಕನ್ನಡ, ತೆಲುಗು, ತಮಿಳಿನಲ್ಲಿ ನಟಿಸಿದ್ದೇನೆ ಎಂದು ಹೇಳಿ ಇದಕ್ಕೆಲ್ಲ ಪ್ರೋತ್ಸಾಹ ನೀಡಿದ  ನಿರ್ದೇಶಕ ಬಾಲಚಂದರ್ ಅವರನ್ನು ನೆನೆದರು. ನನ್ನ ಎಲ್ಲಾ ಬೆಳವಣಿಗೆಗೆ ಬಾಲಚಂದರ್, ಮಹೇಂದರ್ ಕಾರಣ ಎಂದು ರಜನಿ ಅವರನ್ನು ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ರಾಜಕೀಯಕ್ಕೆ ನಾನು ಹೊಸಬನಲ್ಲ ಎಂದು ಹೇಳುವ ಮೂಲಕ ರಾಜಕೀಯಕ್ಕೆ  ಸೇರುವ ಇಂಗಿತ ವ್ಯಕ್ತಪಡಿಸಿದರು. ಇಷ್ಟು ದಿನ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ಡಿ. 31ರಂದು ತಾವು ರಾಜಕೀಯಕ್ಕೆ ಬರುವ ಬಗ್ಗೆ ಘೋಷಣೆ ಹೇಳುವುದಾಗಿ ರಜನಿ ಕೊನೆಯದಾಗಿ ತಿಳಿಸಿದರು.

Recent Comments

Leave Comments

footer
Top