• 19 October 2018 12:22
Jai Kannada
Jai Kannada
Blog single photo
December 25, 2017

ಸಾಫ್ಟ್‌ವೇರ್‌ಗಳಲ್ಲಿ ಉದ್ಯೋಗಿಗಳ ವಜಾ ಸರಿಯಾದ ಕ್ರಮವಲ್ಲ: ಮೂರ್ತಿ 

ಬೆಂಗಳೂರು: ಸಾಫ್ಟ್‌ವೇರ್ ಕಂಪನಿಗಳಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಸಂಬಳವನ್ನು ತಮಗೆ ತಾವೇ ಏರಿಸಿಕೊಳ್ಳುವುದು ಸರಿಯಿಲ್ಲ ಎಂದು ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ಮಾಡಿದ್ದಾರೆ.

 ದೇಶದಲ್ಲಿ ಹೆಚ್ಚಿನ ಜನರು ಬಡತನ ಎದುರಿಸುತ್ತಿರುವಾಗ ಹೀಗೆ ಭಾರೀ ವೇತನ ಪಡೆಯುವುದು ನ್ಯಾಯೋಚಿತವಲ್ಲ ಎಂದು ಅವರು ಹೇಳಿದರು.  ಹೊಸದಾಗಿ ಸೇರಿದ ಉದ್ಯೋಗಿಗಳನ್ನು ಯಾವುದೋ ನೆಪದಲ್ಲಿ ಮನೆಗೆ ಕಳಿಸುವುದು ಸರಿಯಾದ ಕ್ರಮವಲ್ಲ. ಅದರ ಬದಲು ದೊಡ್ಡ ವೇತನ ಪಡೆಯುವ ಮ್ಯಾನೇಜ್‌ಮೆಂಟ್ ಲೆವೆಲ್ ಉದ್ಯೋಗಿಗಳು ತಮ್ಮ ಸಂಬಳ ಕಡಿತ ಮಾಡಿಕೊಂಡು ಕೆಳ ಹಂತದಲ್ಲಿರುವ ಉದ್ಯೋಗಿಗಳನ್ನು ರಕ್ಷಿಸಬೇಕು ಎಂದರು. ಉದ್ಯೋಗಿಗಳನ್ನು ಮನೆಗೆ ಕಳಿಸುವುದು ಸರಿಯಾದ ಕ್ರಮವಲ್ಲ.

ಏಕೆಂದರೆ ಅವರನ್ನು ನಂಬಿಕೊಂಡು ಕುಟುಂಬವೊಂದು ಇರುತ್ತದೆ. ಹಿಂದೆ 2008 ಮತ್ತು 2011ರಲ್ಲಿ ಕೂಡ ಸಮಸ್ಯೆ ಎದುರಾಗಿತ್ತು. ಹೀಗಾಗಿ ನಮಗೆ ಇದು ಹೊಸದಲ್ಲ. ಭವಿಷ್ಯದಲ್ಲಿ ಇಂತಹ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಾರಾಯಣ ಮೂರ್ತಿ ಸಲಹೆ ನೀಡಿದರು.
.

 

Recent Comments

Leave Comments

footer
Top