• 24 March 2019 13:13
Jai Kannada
Jai Kannada
Blog single photo
January 11, 2019

ಸುಳ್ಳು ಮಾಹಿತಿ ನೀಡಬಾರದು: ಮಾಧ್ಯಮವೊಂದಕ್ಕೆ ಚಾಟಿ ಬೀಸಿದ ಯಶ್ 

.ಬೆಂಗಳೂರು: ಮಾಧ್ಯಮದ ವರದಿಗಾರರ ಪ್ರಶ್ನೆಗೆ ಕೆಜಿಎಫ್ ನಟ ಯಶ್ ಖಡಕ್ಕಾಗಿ ಉತ್ತರಿಸಿದ್ದಾರೆ. ಐಟಿಯವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಕೊಡುತ್ತೇವೆ. ಒಂದು ಮಾಧ್ಯಮದವರು ಈ ಕುರಿತು ಬಹಳ ಅದ್ಭುತವಾಗಿ ತೋರಿಸುತ್ತಿದ್ದಾರೆ. ಆದರೆ ಸುಳ್ಳು ಮಾಹಿತಿಗಳನ್ನು ನೀಡಬಾರದು. ಒಂದು ಮನವಿ ಏನೆಂದರೆ ವಿಷಯ ಏನಿದೆಯೋ ಅದನ್ನು ತೋರಿಸಬೇಕು ಎಂದರು.

ಈ ನಡುವೆ ಯಾವ ಮಾಧ್ಯಮ ಎಂದು ಬಹಿರಂಗ ಪಡಿಸಿ ಎಂದು ಮಾಧ್ಯಮದ ರದಿಗಾರ ಕೇಳಿದಾಗ, ತಾವು ಅಷ್ಟೊಂದು ಚೀಪ್ ಆಗಿ ಹೋಗುವುದಿಲ್ಲ ಎಂದು ಯಶ್ ಹೇಳಿದರು. ಯಾವ ಮಾಧ್ಯಮ ಎನ್ನುವುದು ಜನರಿಗೆ ಗೊತ್ತಿರುತ್ತದೆ . ಅದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಎಂದರು. ಒಂದು ಮಾಧ್ಯಮ ಈ ವಿಷಯದಲ್ಲಿ ಊಹಾಪೋಹದ ವರದಿ ಹಬ್ಬಿಸುತ್ತಿದೆ.

ಯಶ್ ಮನೆಯಲ್ಲಿ ಇಷ್ಟು ಕೋಟಿ ಸಿಕ್ಕಿದೆಯೆಂದು ಯಾರಾದರೂ ಹೇಳಿದ್ದರಾ ಎಂದು ಯಶ್ ಖಾರವಾಗಿ ಪ್ರಶ್ನಿಸಿದರು. ಸಾರ್ವಜನಿಕ ವ್ಯಕ್ತಿ ಎಂದಕೂಡಲೇ ಬಾಯಿಗೆ ಬಂದಂತೆ ಮಾತನಾಡಿದರೆ ನಾವು ನೋಡಿಕೊಂಡು ಸುಮ್ಮನಿರಕ್ಕಾಗಲ್ಲ ಎಂದೂ ಯಶ್ ಖಡಕ್ಕಾಗಿ ಹೇಳಿದರು.

Recent Comments

Leave Comments

footer
Top