• 23 September 2019 04:49
Jai Kannada
Jai Kannada
Blog single photo
January 11, 2019

ಚಿತ್ರ ನಟ ಯಶ್ ಆಡಿಟರ್ ಬಸವರಾಜ್ ಕಚೇರಿಗಳ ಮೇಲೆ ಐಟಿ ದಾಳಿ 

.
ಬೆಂಗಳೂರು: ಸಿನಿರಂಗದ ಮತ್ತಷ್ಟು ಗಣ್ಯರಿಗೆ ಇಂದು ಐಟಿ ಶಾಕ್ ನೀಡಿದ್ದು,  ಚಿತ್ರರಂಗದ ಆಡಿಟರ್ ಆಗಿದ್ದ ಬಸವರಾಜ್ 3 ಕಚೇರಿಗಳ ಮೇಲೆ ಐಟಿ ರೇಡ್ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್, ಶಿವರಾಜಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್ ಅವರು ವಿಚಾರಣೆಗೆ ಹಾಜರಾಗಿದ್ದರು.

ಉಳಿದ ನಿರ್ಮಾಪಕರು ಕೂಡ ಐಟಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಯಶ್ ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಬಸವರಾಜ್ ಅವರು ಯಶ್ ಅವರಿಗೂ ಆಡಿಟರ್ ಆಗಿದ್ದರು. ಬಸವರಾಜ್ ಚಿತ್ರರಂಗದ ಇನ್ನೂ 10 ಮಂದಿ ಗಣ್ಯರಿಗೆ ಆಡಿಟರ್ ಆಗಿದ್ದರು.

ಬಸವರಾಜ್ ಮೇಲೆ ರೇಡ್ ಮಾಡಿದ ಸಂದರ್ಭದಲ್ಲಿ ಸಿಸಿಟಿವಿ, ಡಿವಿಆರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ತೆರಿಗೆ ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ಇಂದು ಎಲ್ಲರಿಗೂ ಐಟಿ ನೋಟಿಸ್ ನೀಡುವ ಸಾಧ್ಯತೆಯಿದೆ.

Recent Comments

Leave Comments

footer
Top