• 20 January 2019 06:12
Jai Kannada
Jai Kannada
Blog single photo
January 10, 2019

 ಲುಲಿಯಾ ಜತೆ ಸಲ್ಮಾನ್ ವಿವಾಹಕ್ಕೆ ಅಡ್ಡಬಂದಿರುವುದೇನು?

ಮುಂಬೈ: 2019ನೇ ವರ್ಷದಲ್ಲಿ ಸಲ್ಮಾನ್ ಖಾನ್ ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳಾಗುವ ಲಕ್ಷಣಗಳು ಕಂಡುಬಂದಿವೆ. ಆದರೆ ಅವರ ಪ್ರೇಯಸಿ ಲುಲಿಯಾ ಜತೆ ಸಲ್ಮಾನ್ ವಿವಾಹ ಮುಂದೂಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಸಲ್ಮಾನ್ ಅವರೇ ಉತ್ತರನೀಡಿದ್ದಾರೆ. ಕೃಷ್ಣಮೃಗ ಬೇಟೆಯ ಪ್ರಕರಣದಲ್ಲಿ  ಅವರು ದೋಷಮುಕ್ತರಾದರೆ ಅವರಿಗೆ ಒಳ್ಳೆಯದಾಗುತ್ತದೆ.

ಆದರೆ ತಪ್ಪಿತಸ್ಥರಾಗಿ ಅನೇಕ ವರ್ಷ ಜೈಲುವಾಸಕ್ಕೆ ತುತ್ತಾದರೆ ಅವರಿಗೆ ಅಶುಭವಾಗುತ್ತದೆ. ಇವೆಲ್ಲವೂ ಒಂದು ವಿಷಯದೊಂದಿಗೆ ತಳಕುಹಾಕಿಕೊಂಡಿದೆ. ಅವರ ಪ್ರೀತಿಯ ಮನದನ್ನೆ ಲುಲಿಯಾ ವಂತುರ್ ಜತೆ ವಿವಾಹ.

 ಸಲ್ಮಾನ್ ತನ್ನ ಕುಟುಂಬದವರೊಂದಿಗೆ ಗೋವಾದಲ್ಲಿ ಹೊಸ ವರ್ಷ ಕಳೆಯಲು ತೆರಳಿದ್ದಾಗ ಲುಲಿಯಾ ವಂತೂರ್ ಕೂಡ ಜತೆಗೂಡಿದ್ದರು.
ಪಾನ್ವೆಲ್ ತೋಟದ ಮನೆಯಲ್ಲಿ ಸಲ್ಮಾನ್ 53ನೇ ಹುಟ್ಟುಹಬ್ಬದಂದು ಲುಲಿಯಾ ಜತೆಯಲ್ಲೇ ಇದ್ದರು. ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ನಿರ್ದೋಷಿ ಎಂದು ಸಾಬೀತಾಗುತ್ತಿದ್ದಂತೆಯೇ ಸಲ್ಮಾನ್ ಲುಲಿಯಾರನ್ನು ವರಿಸಲಿದ್ದಾರೆ. 
ತಮಗೆ ಉನ್ನತ ಕೋರ್ಟ್‌ನಲ್ಲಿ ಶಿಕ್ಷೆಯಾದರೆ ಲುಲಿಯಾರಿಗೆ ತೊಂದರೆ ನೀಡುವುದು ಇಷ್ಟವಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. 
 

Recent Comments

Leave Comments

footer
Top