• 24 March 2019 12:31
Jai Kannada
Jai Kannada
Blog single photo
January 09, 2019

ಮಹಿಳಾ ಪ್ರಯಾಣಿಕರಿಗೆಂದೇ ಮಹಿಳಾ ಚಾಲಕರ ಪಿಂಕ್ ಕ್ಯಾಬ್ 


ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಕ್ಕೆ ಹೋಗುವ, ಅಲ್ಲಿಂದ ಬರುವ ಮಹಿಳಾ ಪ್ರಯಾಣಿಕರು ಇನ್ನು ಯಾವುದೇ ಲೈಂಗಿಕ ಕಿರುಕುಳದ ಭೀತಿಗೆ ಒಳಗಾಗದೇ ಕ್ಷೇಮವಾಗಿ ತಲುಪಬಹುದು. ಇದಕ್ಕೆ ಕಾರಣ ಮಹಿಳಾ ಪ್ರಯಾಣಿಕರಿಗೆಂದೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಮಹಿಳಾ ಚಾಲಕರ ಕ್ಯಾಬ್‌ಗಳಿಗೆ ಚಾಲನೆ ನೀಡಲಾಗಿದೆ.

ಮಹಿಳಾ ಚಾಲಕರು ಬಹುಭಾಷೆಗಳಲ್ಲಿ ಪರಿಣಿತರಾಗಿದ್ದು ಸ್ಥಳೀಯ ಭಾಷೆ ಅರಿತಿರುತ್ತಾರೆ ಮತ್ತು ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆತ್ಮರಕ್ಷಣೆ ತಂತ್ರಗಳಲ್ಲಿ ತರಬೇತಿ ಹೊಂದಿದ್ದಾರೆ ಎಂದು ಏರ್ ಪೋರ್ಟ್ ಹೇಳಿಕೆಯಲ್ಲಿ ತಿಳಿಸಿದೆ.


ಮಹಿಳಾ ಚಾಲಿತ ಟ್ಯಾಕ್ಸಿ ಸೇವೆಯನ್ನು ಕೆಎಸ್‌ಟಿಡಿಸಿ ಮತ್ತು ಬಿಎಐಎಲ್ ಜತೆಗೂಡಿ ಆರಂಭಿಸಿದೆ. ಸುರಕ್ಷತೆ ಉಪಕರಣಗಳಿಂದ ಕ್ಯಾಬ್‌ಗಳನ್ನು ಸಜ್ಜುಗೊಳಿಸಲಾಗಿದ್ದು, ತುರ್ತು ಸಂದರ್ಭಗಳಿಗಾಗಿ ಜಿಪಿಆರ್‌ಎಸ್ ಟ್ರಾಕಿಂಗ್ ಮತ್ತು ಎಸ್‌ಒಎಸ್ ಸ್ವಿಚ್ ಮುಂತಾದವು ಇರುತ್ತದೆ.

ಪ್ರಾಯೋಗಿಕ ಆಧಾರದ ಮೇಲೆ ಈ ಸೇವೆಯನ್ನು ಆರಂಭಿಸಲಾಗಿದ್ದು, ಮೊದಲಿಗೆ 10 ಕಾರುಗಳಿಂದ ಆರಂಭಿಸಲಾಗಿದ್ದು ಕ್ರಮೇಣ ಪ್ರಯಾಣಿಕರ ಬೇಡಿಕೆ ಮತ್ತು ಪ್ರತಿಕ್ರಿಯೆ ಆಧರಿಸಿ ಹೆಚ್ಚಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

.ಒಂಟಿ ಮಹಿಳಾ ಪ್ರಯಾಣಿಕರು ಅಥವಾ ಮಹಿಳೆಯರ ಗುಂಪು ಈ ಸೇವೆ ಪಡೆಯಬಹುದು..ಪಿಂಕ್ ಕ್ಯಾಬ್ ಸೇವೆ 24 ಗಂಟೆಯೂ ಲಭ್ಯವಿದ್ದು ಕಿಮೀಗೆ ತಲಾ 21. 50 ರೂ. ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಕಿಮೀಗೆ ತಲಾ 23.50 ರೂಗಳಾಗಿರುತ್ತವೆ. ಈ ಸೇವೆಯಿಂದ ಮಹಿಳಾ ಚಾಲಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಕೆಎಸ್‌ಟಿಡಿಸಿ ಎಂಡಿ ಕುಮಾರ್ ಫುಶ್ಕಾರ್ ಹೇಳಿದ್ದಾರೆ.
.
 

Recent Comments

Leave Comments

footer
Top