• 20 January 2019 07:13
Jai Kannada
Jai Kannada
Blog single photo
January 09, 2019

ಮೆಕ್ಸಿಕೊ ಗಡಿಗೆ ಗೋಡೆ ಯೋಜನೆ: ರಾನಿಲ್ ಸಿಂಗ್ ಹತ್ಯೆಯನ್ನು ಉಲ್ಲೇಖಿಸಿದ ಟ್ರಂಪ್ 

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓವಲ್ ಕಚೇರಿ ಭಾಷಣದಲ್ಲಿ ಗಡಿಗೆ ಗೋಡೆ ನಿರ್ಮಿಸುವ ತಮ್ಮ ಯೋಜನೆ ಬಗ್ಗೆ ಟೆಲಿವಿಷನ್ ಸಮರವನ್ನು ತೀವ್ರಗೊಳಿಸಿದ್ದು, ಅಕ್ರಮ ವಲಸಿಗನೊಬ್ಬ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ-ಅಮೆರಿಕನ್ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. 
ಮೆಕ್ಸಿಕೊ ಗಡಿಯಲ್ಲಿ ಗೋಡೆಯನ್ನು ನಿರ್ಮಿಸುವ ಮೂಲಕ ದೇಶವನ್ನು ಸುರಕ್ಷಿತವಾಗಿಡಲು 5.7 ಶತಕೋಟಿ ಡಾಲರ್  ಫಂಡ್ ಬೇಕೆಂದು ಅವರು ಬೇಡಿಕೆ ಸಲ್ಲಿಸಿದರು. 
ಅಕ್ರಮ ವಲಸಿಗ ಗುಸ್ಟಾವೊ ಪೆರೆಜ್ ಎಂಬವ ತನ್ನ ತವರುದೇಶ ಮೆಕ್ಸಿಕೊಗೆ ಪಲಾಯನ ಮಾಡಲು ಯೋಜಿಸಿ ತನ್ನನ್ನು ತಡೆಯಲು ಬಂದ ಭಾರತೀಯ ಮೂಲದ  ಪೊಲೀಸ್ ಅಧಿಕಾರಿ ರಾನಿಲ್ ಸಿಂಗ್ ಎಂಬವರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದಿದ್ದ.
ಕ್ರಿಸ್‌ಮಸ್ ಬಳಿಕ ಅಕ್ರಮ ವಲಸಿಗನು ಹಾರಿಸಿದ ಗುಂಡಿಗೆ ಯುವ ಪೊಲೀಸ್ ಅಧಿಕಾರಿ ಹಾಡಹಗಲೇ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಹೇಯ ಘಟನೆ. ಅಮೆರಿಕದ ಹೀರೋನ ಜೀವವನ್ನು ಈ ದೇಶದಲ್ಲಿ ಇರಲು ಹಕ್ಕು ಹೊಂದಿರದ ವ್ಯಕ್ತಿ ಅಪಹರಿಸಿದ ಎಂದು ಟ್ರಂಪ್ ಭಾವುಕರಾಗಿ ಹೇಳಿದ್ದರು.

ಇದೊಂದು ಮಾನವೀಯ ಬಿಕ್ಕಟ್ಟು, ಇದು ಹೃದಯದ ಮತ್ತು ಆತ್ಮದ ಬಿಕ್ಕಟ್ಟು ಎಂದು ಹೇಳಿದರು. ಡೆಮೋಕ್ರಾಟರು ಗಡಿ ಭದ್ರತೆಗೆ ಹಣ ನೀಡಲು ನಿರಾಕರಿಸಿದ್ದರಿಂದ ಫೆಡರಲ್ ಸರ್ಕಾರ ಸ್ತಬ್ಧವಾಗಿದೆ ಎಂದು ಟ್ರಂಪ್ ನುಡಿದಿದ್ದರು. 

Recent Comments

Leave Comments

footer
Top