• 24 March 2019 12:30
Jai Kannada
Jai Kannada
Blog single photo
January 07, 2019

ಅಮೆರಿಕದಲ್ಲಿ ತೆಲಂಗಾಣದ ಯುವಕನಿಗೆ ಗುಂಡೇಟು: ಜೀವನ್ಮರಣ ಹೋರಾಟ

ಹೈದರಾಬಾದ್:  ಅಮೆರಿಕದಲ್ಲಿ ಉದ್ಯೋಗದಲ್ಲಿರುವ ತೆಲಂಗಾಣ ರಾಜ್ಯಕ್ಕೆ ಸೇರಿದ ಯುವಕನೊಬ್ಬ ದರೋಡೆಕೋರರ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಸಾವು, ಬದುಕಿನ ಹೋರಾಟ ನಡೆಸಿದ್ದಾರೆ. ಸಾಯಿಕೃಷ್ಣ ಎಂಬ ಎಲೆಕ್ಟ್ರಿಕಲ್ ಎಂಜಿನಿಯರ್ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ಯಾಂತ್ರಿಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದ್ದು, ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಲಿದ್ದಾನೆ ಎಂದು ಅವರ ಸೋದರ ಸಂಬಂಧಿ ತಿಳಿಸಿದ್ದಾರೆ.

ಉತ್ತಮ ಉದ್ಯೋಗಾವಕಾಶಗಳನ್ನು ಅರಸಿಕೊಂಡು ಸಾಯಿಕೃಷ್ಣ ಅಮೆರಿಕಕ್ಕೆ ತೆರಳಿದ್ದರು. ಲಾರೆನ್ಸ್ ಟೆಕ್ ವಿವಿಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಅವರು ಡೆಟ್ರಾಯಿಟ್ ಮೂಲದ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.

ಸಾಯಿಕೃಷ್ಣ ಅವರು ದುರ್ಬಲ ವರ್ಗಕ್ಕೆ ಸೇರಿದ್ದು, ಉತ್ತಮ ಭವಿಷ್ಯ ಅರಸಿಕೊಂಡು ಅಮೆರಿಕಕ್ಕೆ ತೆರಳು ಮುಂಚೆ ಜೀವನ ನಿರ್ವಹಣೆಗೆ ತುಂಬಾ ಹೋರಾಟ ನಡೆಸಿದ್ದರು. ಅಮೆರಿಕದಲ್ಲಿ ಅವರ ಶಿಕ್ಷಣ ಮುಗಿದ ಕೂಡಲೇ ಡೆಟ್ರಾಯಿಟ್‌ನಲ್ಲಿ ಕೆಲಸಕ್ಕೆ ಸೇರಿದ್ದ ಅವರು 11.30ಕ್ಕೆ ಕೆಲಸಕ್ಕೆ ತೆರಳಿ ರಸ್ತೆಯಲ್ಲಿ ಕೆಲವು ಆಹಾರ ಸೇವಿಸಿದ್ದರು. ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ ಎಂದು ಕೃಷ್ಣ ಸ್ನೇಹಿತ ಸ್ರುಜಿತ್ ತಿಳಿಸಿದ್ದಾರೆ.

ದರೋಡೆಕೋರರು ಕೃಷ್ಣನ ಕಾರಿನಲ್ಲಿ ಬಲಪ್ರಯೋಗದಿಂದ ಕುಳಿತು ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವನ ಬಳಿಯಿದ್ದ ಎಲ್ಲಾ ವಸ್ತುಗಳನ್ನು ದೋಚಿದರು. ಬಳಿಕ ಅವನತ್ತ ಮೂರು ಸುತ್ತು ಗುಂಡುಹಾರಿಸಿ, ತೀವ್ರ ಗಾಯಗೊಳಿಸಿದರಲ್ಲದೇ ಪರ್ಸ್ ಮತ್ತು ಕಾರಿನೊಂದಿಗೆ ಪರಾರಿಯಾಗಿದ್ದರು.

ಸಾಯಿಕೃಷ್ಣ ಅವರ ವೈದ್ಯಕೀಯ ವೆಚ್ಚ ಭರಿಸಲು ಅವರ ಸ್ನೇಹಿತರು ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ್ದಾರೆ. ಸಪೋರ್ಟ್ ಸಾಯಿಕೃಷ್ಣ ಎಂಬ ಶಿರೋನಾಮೆಯೊಂದಿಗೆ ಗೋಫಂಡ್‌ಮಿಯಲ್ಲಿ ಈ ಅಭಿಯಾನ ಆರಂಭಿಸಿದರು. ಒಟ್ಟು 250,000 ಡಾಲರ್ ಪೈಕಿ ಈಗಾಗಲೇ 124, 737 ಡಾಲರ್ ಸಂಗ್ರಹವಾಗಿದೆ.

Recent Comments

Leave Comments

footer
Top