• 20 January 2019 06:25
Jai Kannada
Jai Kannada
Blog single photo
January 06, 2019

ಭಾರತದ ಜತೆ ಬಾಂಧವ್ಯಕ್ಕೆ ಇಮ್ರಾನ್ ಖಾನ್ ಕರೆ

ಇಸ್ಲಾಮಾಬಾದ್: ಇಷ್ಟು ವರ್ಷಗಳವರೆಗೆ ಭಾರತದ ಜತೆ ಕಾಲು ಕೆರೆದುಕೊಂಡು ಜಗಳಕ್ಕಿಳಿಯುತ್ತಿದ್ದ ಪಾಕಿಸ್ತಾನ ಈಗ ಆರ್ಥಿಕ ಪ್ರಗತಿ ಸಾಧಿಸುವುದಕ್ಕೆ ಸ್ಥಿರತೆ ಕಾಪಾಡಲು ಬಯಸಿದೆ. ಭಾರತದ ಜತೆ ಸ್ನೇಹ ಬಾಂಧವ್ಯಕ್ಕಾಗಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಕರೆ ನೀಡಿದರು.

ಉಭಯ ರಾಷ್ಟ್ರಗಳ ನಡುವೆ ಮೂಲ ಸಮಸ್ಯೆ ಕಾಶ್ಮೀರ. ನಾವು ಸ್ನೇಹ ಸಂಬಂಧತ್ತ ಹೋಗಲು ಪ್ರಯತ್ನಿಸುತ್ತೇವೆ. ಪಾಕಿಸ್ತಾನಕ್ಕೆ ಸ್ಥಿರತೆಯ ಅವಶ್ಯಕತೆಯಿದೆ. ಏಕೆಂದರೆ ನಾವು ಆರ್ಥಿಕ ಪ್ರಗತಿ ಬಯಸುತ್ತೇವೆ ಎಂದು ತುರ್ಕಿ ಅಧ್ಯಕ್ಷ ರಿಸೆಪ್ ತಾಯಿಪ್ ಎರ್ಡೋಗನ್ ಜತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಾನ್ ತಿಳಿಸಿದರು.

ಭಾರತ ಪಾಕಿಸ್ತಾನವು ಭಯೋತ್ಪಾದನೆ ನಿಲ್ಲಿಸುವ ತನಕ ಅದರ ಜತೆ ಮಾತುಕತೆಯಿಲ್ಲವೆಂದು ಹೇಳಿದೆ. ಇದೊಂದು ವಿಲಕ್ಷಣ ಸ್ಥಿತಿಯಾಗಿದ್ದು, ಮಾತುಕತೆಯಿಲ್ಲದ್ದರೆ ನಾವು ಮುಂದಡಿ ಇಡುವುದು ಹೇಗೆ, ಆದರೆ ಉಭಯ ರಾಷ್ಟ್ರಗಳ ನಡುವೆ ಮೂಲ ಸಮಸ್ಯೆಯಿರುವುದು ಕಾಶ್ಮೀರ ವಿವಾದ ಎಂದು ನುಡಿದರು.. 

 ಆದರೆ ಭಾರತ ಪ್ರತಿ ಭಾರಿ ಮಾತುಕತೆಗೆ ಸಿದ್ಧತೆ ನಡೆಸಿದಾಗಲೆಲ್ಲಾ ಪಾಕಿಸ್ತಾನದ ಉಗ್ರರು ಭಯೋತ್ಪಾದನೆಯ ಮೂಲಕ ಉತ್ತರಿಸಿದ್ದರಿಂದ ಭಾರತ ಕಾಶ್ಮೀರ ವಿವಾದ ಕುರಿತ ಮಾತುಕತೆಯನ್ನು ಸ್ಥಗಿತಗೊಳಿಸಿತ್ತು.
 

Recent Comments

Leave Comments

footer
Top