• 20 March 2019 19:36
Jai Kannada
Jai Kannada
Blog single photo
January 06, 2019

ಸೆಲ್ಫೀ ದುರಂತಕ್ಕೆ ಭಾರತೀಯ ವಿದ್ಯಾರ್ಥಿ ಬಲಿ 

ಡಬ್ಲಿನ್: ಅನಿವಾಸಿ ಭಾರತೀಯ ವಿದ್ಯಾರ್ಥಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ಐರ್ಲೆಂಡ್‌ನ ಕಡಿದಾದ ಬಂಡೆಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವ ದುರಂತ ಸಂಭವಿಸಿದೆ.

ಡಬ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ 20 ರ ಹರೆಯದ ಅಪರಿಚಿತ ಭಾರತೀಯ ಪೌರ ಜನಪ್ರಿಯ ಪ್ರವಾಸಿ ಆಕರ್ಷಣೆಯ ಕೌಂಟಿ ಕ್ಲೇರ್ ಮೊಹೆರ್ ಕ್ಲಿಫ್‌ನಲ್ಲಿ ಮೊಬೈಲ್ ಚಿತ್ರ ತೆಗೆಯುವಾಗ ಆಯತಪ್ಪಿ ಬಂಡೆಯಿಂದ ಕೆಳಕ್ಕೆ ಬಿದ್ದನೆಂದು ಗೊತ್ತಾಗಿದೆ.

ಪ್ರವಾಸಿಗಳ ಕೇಂದ್ರದ ಬಳಿಕ ಮುಖ್ಯ ವೀಕ್ಷಣೆ ಪ್ರದೇಶದ ದಕ್ಷಿಣದಲ್ಲಿ ಈ ದುರಂತ ಸಂಭವಿಸಿದೆ. ನೂರಾರು ಜನರು ಪ್ರಕೃತಿ ಸೌಂದರ್ಯ ಸವಿಯುವಾಗಿ ಕ್ಲಿಫ್ ವಾಕ್ ಮಾಡುವಾಗ ಈ ದುರಂತ ಸಂಭವಿಸಿದೆ.

ಅಪಾಯದ ಸೂಚನೆ ನೀಡಿದ ಕೂಡದೇ ತುರ್ತು ಸೇವೆಗಳು ಸೇರಿದಂತೆ ಶೋಧ ಹೆಲಿಕಾಪ್ಟರನ್ನು ಸಿದ್ಧವಿಡಲಾಯಿತು. ಹೆಲಿಕಾಪ್ಟರಿನಲ್ಲಿದ್ದ ಈಜುಗಾರ ಸಮುದ್ರದಿಂದ ಯುವಕನ ಶವವನ್ನು ಹೊರತೆಗೆದಿದ್ದು, ಸಮೀಪದ ಡೂಲಿನ್‌ನಲ್ಲಿ ಅವನ ದೇಹ ಪತ್ತೆಯಾಗಿತ್ತು.
ಪೊಲೀಸರು ಅನೇಕ ಮಂದಿ ಪ್ಪತ್ಯಕ್ಷ ಸಾಕ್ಷಿಗಳನ್ನು ಪ್ರಶ್ನಿಸಿ, ಸಾವನ್ನು ಆಕಸ್ಮಿಕವಾಗಿ ಘಟಿಸಿದ ದುರಂತ  ಎಂದು ಖಚಿತಪಡಿಸಿದರು.
ಭಾರತದಲ್ಲಿರುವ ಮೃತನ ಕುಟುಂಬವನ್ನು ಸಂಪರ್ಕಿಸಲು  ಪೊಲೀಸರು ಯತ್ನಿಸಿದ್ದಾರೆ. 2007ರ ಜೂನ್‌ನಲ್ಲಿ 20ರ ಆಸುಪಾಸಿನಲ್ಲಿದ್ದ ಹಂಗರಿ ಯುವಕ ಮೊಹೆಲ್ ಕ್ಲಿಫ್‌ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಮೃತಪಟ್ಟಿದ್ದ.

Recent Comments

Leave Comments

footer
Top