• 20 March 2019 18:57
Jai Kannada
Jai Kannada
Blog single photo
January 02, 2019

ಮಗನಿಗೆ ನಾವೇ ಆಪರೇಷನ್ ಮಾಡುತ್ತೇವೆಂದ ದಂಪತಿ: ವೈದ್ಯರಿಗೆ ದಿಗ್ಭ್ರಮೆ

ಬೆಂಗಳೂರು: ಇತ್ತೀಚೆಗೆ ದಂಪತಿಯೊಬ್ಬರು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಪ್ರವೇಶಿಸಿ ತಮ್ಮ ಪುತ್ರನಿಗೆ ನಾವೇ ಆಪರೇಷನ್ ಮಾಡುತ್ತೇವೆ. ನಮಗೆ ನರ್ಸ್ ಒಬ್ಬರನ್ನು ಮಾತ್ರ ಒದಗಿಸಿ ಎಂದು ಹೇಳಿದಾಗ ವೈದ್ಯರು ದಿಗ್ಮೂಢರಾದರು.  ಆನ್‌ಲೈನ್ ವಿಡಿಯೊಗಳನ್ನು ನೋಡಿದ್ದ ದಂಪತಿ ಆಪರೇಷನ್ ಮಾಡುವುದಕ್ಕೆ ರೆಡಿಯಾಗಿ ಬಂದಿದ್ದರು. 

ಆಸ್ಪತ್ರೆಯಲ್ಲಿ ಅನಗತ್ಯ ವೆಚ್ಚಗಳನ್ನು ವಿಧಿಸುವುದರಿಂದ ತಮಗೆ ನರ್ಸ್ ಮತ್ತು ಉಪಕರಣಗಳನ್ನು ನೀಡಿದರೆ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ ಎಂದಿದ್ದರು.

ಎಷ್ಟು ಮನವಿ ಮಾಡಿಕೊಂಡರು ಆಸ್ಪತ್ರೆ ಇದಕ್ಕೆ ಒಪ್ಪದಿದ್ದರಿಂದ ಅವರು ತಮ್ಮ ಪುತ್ರನನ್ನು ಬೇರೆಡೆಗೆ ಕರೆದೊಯ್ದರು.
ಇತ್ತೀಚೆಗೆ ಜುಲೈನಲ್ಲಿ ಹೆರಿಗೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಹಿಳೆ ತಮ್ಮ ಪತಿಗೆ ಅವರೇ ಪ್ರಸೂತಿ ಕೆಲಸವನ್ನು ನಿರ್ವಹಿಸುವಂತೆ ಯೂಟ್ಯೂಬ್ ವಿಡಿಯೊಗಳನ್ನು ನೋಡಿದ ಬಳಿಕ ತಿಳಿಸಿದ್ದಳು.

ದಂಪತಿ ಮನೆಯಲ್ಲೇ ಮಗುವಿಗೆ ಜನ್ಮನೀಡುವ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರೆಂದು ವೈದ್ಯರು ತಿಳಿಸಿದ್ದಾರೆ.  ಇದರಿಂದ ಪ್ರಚೋದಿತಳಾದ ಮಹಿಳೆ ತಮ್ಮ ಪತಿಗೆ ನೀವೇ ಮನೆಯಲ್ಲಿ ಹೆರಿಗೆ ಮಾಡುವಂತೆ ಸೂಚಿಸಿದ್ದರು. ಆದರೆ ಮಗು ಸುರಕ್ಷಿತವಾಗಿ ಜನನವಾಗಿದ್ದರೂ ಮಗುವನ್ನು ಹೆತ್ತ ಮಹಿಳೆ ದುರದೃಷ್ಟವಶಾತ್ ತೀರಿಕೊಂಡರು. ಇದಕ್ಕೆ ಮಗುವನ್ನು ಹೆತ್ತ ನಂತರ ಮಹಿಳೆಗೆ ನೀಡಬೇಕಾದ ಚಿಕಿತ್ಸೆಯ ಅಲಭ್ಯತೆಯೇ ಕಾರಣವೆಂದು ಹೇಳಲಾಗುತ್ತಿದೆ. ಇಂತಹ ಶಸ್ತ್ರಕ್ರಿಯೆಗಳನ್ನು ನಡೆಸಲು ವೈದ್ಯರಿಗೆ ತರಬೇತಿ ನೀಡಲಾಗಿರುತ್ತದೆ. ನಿರ್ದಿಷ್ಟ ವ್ಯಕ್ತಿಗೆ ಯಾವ ಅಡಚಣೆಗಳು ಎದುರಾಗುತ್ತದೆಂದು ನಮಗೆ ಗೊತ್ತಿರುತ್ತದೆ. ಅಂತಹ ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ ಎಂದು ಡಾ. ಸ್ವಾತಿ ಹೇಳಿದ್ದಾರೆ.
 

Recent Comments

Leave Comments

footer
Top