• 17 December 2018 02:06
Jai Kannada
Jai Kannada
Blog single photo
November 12, 2018

ಮತ್ತೆ ಪರಪ್ಪನ ಪಾಲಾದ ಜನಾರ್ದನ ರೆಡ್ಡಿಗೆ 24ರವರೆಗೆ ನ್ಯಾಯಾಂಗ ಬಂಧನ 

  ಬೆಂಗಳೂರು: ಸಾರ್ವಜನಿಕರಿಗೆ ಬಹುಕೋಟಿ ರೂ. ವಂಚಿಸಿದ ಆ್ಯಂಬಿಡೆಂಡ್ ಕಂಪನಿ ಮಾಲೀಕ ಫರೀದ್ ಅವರಿಗೆ ನೆರವಾಗಲು 20 ಕೋಟಿ ಮೌಲ್ಯದ ಲಂಚವನ್ನು ಚಿನ್ನದ ರೂಪದಲ್ಲಿ ಪಡೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲು ಸೇರಿದ ಗಾಲಿ ಜನಾರ್ದನ ರೆಡ್ಡಿಯವರಿಗೆ ಇದೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

1ನೇ ಎಸಿಎಂಎಂ ನ್ಯಾಯಾಲಯ ರೆಡ್ಡಿಯವರಿಗೆ ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪು ಪ್ರಕಟಿಸಿದ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಒಯ್ಯಲಾಯಿತು. ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಹಾಗೂ ಅಂಬಿಕಾ ಜ್ಯುವೆಲರ್ಸ್ ಮಾಲೀಕ ರಮೇಶ್ ಕೊಠಾರಿ ಜನಾರ್ದನ ರೆಡ್ಡಿ ವಿರುದ್ಧ ನೀಡಿದ ಹೇಳಿಕೆಗಳು ರೆಡ್ಡಿ ಅವರಿಗೆ ಮುಳುವಾಗಿ ಮತ್ತೆ ಜೈಲು ಸೇರುವಂತಾಯಿತು.

 ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಫರೀದ್ ವಿರುದ್ಧ ಜಾರಿ ನಿರ್ದೇಶನಾಲಯವು ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿತ್ತು. ಇ,ಡಿ.ಪ್ರಕರಣದಲ್ಲಿ ನೆರವಾಗುವುದಾಗಿ ಹೇಳಿ ಜನಾರ್ದನ ರೆಡ್ಡಿ 20 ಕೋಟಿ ರೂ. ಕೇಳಿದ್ದರು. ಅವರ ಸಲಹೆಯಂತೆ ಆಭರಣ ವ್ಯಾಪಾರಿ ರಮೇಶ್ ಕೊಠಾರಿ ಬ್ಯಾಂಕ್ ಖಾತೆಗೆ 20 ಕೋಟಿ ರೂ. ಹಾಕಿದ್ದೆ.

ಅವರು ಹಣದ ಬದಲಿಗೆ ರೆಡ್ಡಿಗೆ 57 ಕೆಜಿ ಚಿನ್ನವನ್ನು ಮುಟ್ಟಿಸಿದ್ದರು ಎಂದು ಫರೀದ್ ಹೇಳಿಕೆ ನೀಡಿದ್ದಾರೆ. ಫರೀದ್ ಅವರೇ 20 ಕೋಟಿ ಪಾವತಿಸಿ ಚಿನ್ನ ಖರೀದಿಸಿದಂತೆ ನಕಲಿ ಬಿಲ್ ಕೂಡ ಸೃಷ್ಟಿಸಲಾಗಿತ್ತು. ಆ ನಕಲಿ ಬಿಲ್‌ಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. 
 

Recent Comments

Leave Comments

footer
Top