• 18 October 2018 20:25
Jai Kannada
Jai Kannada
Blog single photo
October 07, 2018

ಲೋಕಸಭೆ ಉಪಚುನಾವಣೆ:  ಮೂರು ಪಕ್ಷಗಳಲ್ಲಿ ಅಸಮಾಧಾನ 

ನವದೆಹಲಿ: ಮೂರು ಪಕ್ಷಗಳಿಗೂ ಲೋಕಸಭೆ ಉಪಚುನಾವಣೆ ಬಗ್ಗೆ ತೀವ್ರ ಅಸಮಾಧಾನ ಕಾಣಿಸಿದ್ದು, ಅಲ್ಪಾವಧಿಗೆ ಚುನಾವಣೆ ಬೇಕಿತ್ತೇ ಎಂಬ ಪ್ರಶ್ನೆ ಎಲ್ಲಾ ಪಕ್ಷಗಳನ್ನು ಕಾಡಿದೆ. ಇನ್ನು ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವುದರಿಂದ ಚುನಾವಣೆಯಲ್ಲಿ ಗೆದ್ದವರು 4-5 ತಿಂಗಳು ಮಾತ್ರ ಸಂಸದರಾಗಿರುತ್ತಾರೆ.

ಆದರೆ ಚುನಾವಣೆ ಆಯೋಗ ಚುನಾವಣೆ ನಡೆಸಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಪಕ್ಷಗಳಿಗೆ ಮಾತ್ರ ಇದು ತಲೆನೋವಾಗಿದೆ. 3 ಪಕ್ಷಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡೋದೇ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.

ಚುನಾವಣೆ ಆಯೋಗ ನಿನ್ನೆ ಲೋಕಸಭೆ ಉಪಚುನಾವಣೆ ಘೋಷಿಸಿದ ಕೂಡಲೇ ಎಲ್ಲಾ ಪಕ್ಷಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಯಾವ ಪಕ್ಷವೂ ಉಪಚುನಾವಣೆಗೆ ಸಿದ್ಧತೆ ಮಾಡಿಕೊಂಡಿರಲಿಲ್ಲವೆಂದು ಗೊತ್ತಾಗಿದೆ. ಅಲ್ಲದೇ ಕೇವಲ 4-5 ತಿಂಗಳ ಅವಧಿಗೆ ಮಾತ್ರ ಸ್ಪರ್ಧಿಸಲು, ಅಭ್ಯರ್ಥಿಯಾಗಿ  ನಿಲ್ಲಲು ಯಾರೂ ಮುಂದೆ ಬರುತ್ತಿಲ್ಲವೆಂದು ಹೇಳಲಾಗುತ್ತಿದೆ.

Recent Comments

Leave Comments

footer
Top