• 18 October 2018 20:25
Jai Kannada
Jai Kannada
Blog single photo
October 05, 2018

ಪೌರಕಾರ್ಮಿಕರ ಮುಷ್ಕರ: ಗುಡ್ಡೆಗಳಾಗಿ ಬಿದ್ದ ಕಸದ ರಾಶಿ 


ಬೆಂಗಳೂರು: ಸ್ವಚ್ಛ ನಗರವೆನಿಸಿಕೊಂಡಿದ್ದ ಮೈಸೂರು ಪೌರಕಾರ್ಮಿಕರ ಮುಷ್ಕರದಿಂದ ಸ್ವಚ್ಛತೆ ಕಳೆದುಕೊಂಡಿದೆ. 3 ದಿನಗಳಿಂದ ಪೌರ ಕಾರ್ಮಿಕರು ಪ್ರತಿಭಟನೆ ಮಾಡುತ್ತಿರುವುದರಿಂದ ಕಸ ವಿಲೇವಾರಿಯಾಗದೇ ಹಾಗೇ ಉಳಿದಿದೆ.

ಪೌರಕಾರ್ಮಿಕರು ರಸ್ತೆಗಳಲ್ಲೇ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಪಾಲಿಕೆಯ 2 ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರೂ ಜಿಲ್ಲಾಡಳಿತವಾಗಲೀ, ಪಾಲಿಕೆಯಾಗಲಿ ಆ ಕಡೆ ಗಮನಹರಿಸಿಲ್ಲ.

ಇದರಿಂದ ನಗರದ ಬಹುತೇಕ ಕಡೆ ಕಸವು ಗುಡ್ಡೆಗಳಾಗಿ ಬಿದ್ದಿದ್ದು, ಸಾಂಕ್ರಾಮಿಕ ರೋಗ ಉಂಟಾಗುವ ಭೀತಿ ಆವರಿಸಿದೆ.

Recent Comments

Leave Comments

footer
Top