• 15 December 2018 22:15
Jai Kannada
Jai Kannada
Blog single photo
October 05, 2018

ಟಿ.ಆರ್. ಸ್ವಾಮಿ ನಿವಾಸದಲ್ಲಿ ರಾಶಿ,ರಾಶಿ ಹಣ ಎಣಿಕೆಗೆ ಮಷಿನ್ ತಂದ ಎಸಿಬಿ

ಬೆಂಗಳೂರು: ಕೆಐಎಡಿಬಿ ಅಧಿಕಾರಿಯಾದ ಟಿ.ಆರ್. ಸ್ವಾಮಿ ನಿವಾಸದ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣವನ್ನು ಎಣಿಸಲು ಮೆಷಿನ್ ತರುವ ಮೂಲಕ ಹಣ ಎಣಿಕೆ ಆರಂಭಿಸಿದ್ದಾರೆಂದು ಗೊತ್ತಾಗಿದೆ.  ಟಿ.ಆರ್. ಸ್ವಾಮಿ ನಿವಾಸದ ಮೇಲೆ ದಾಳಿ ಮಾಡಲು ಎಸಿಬಿ ಅಧಿಕಾರಿಗಳು ಹೋಗಿದ್ದಾಗ ಬಾಗಿಲನ್ನೇ ತೆಗೆದಿರಲಿಲ್ಲ.

ಬಳಿಕ ಅಧಿಕಾರಿಗಳು ಬಾಗಿಲು ಒಡೆದು ಒಳನುಗ್ಗಿದಾಗ ಅಪಾರ ಪ್ರಮಾಣದ ನಗದು ಹಣ ಪತ್ತೆಯಾಗಿದೆ. ಈ ಹಣದ ಪ್ರಮಾಣ 5 ಕೋಟಿ ರೂ.ಗಳಿಗಿಂತ ಹೆಚ್ಚೆಂದು ಅಂದಾಜು ಮಾಡಲಾಗಿದ್ದು, ಹಣ ಎಣಿಸುವ ಮೆಷಿನ್ ತರಿಸಿ ಹಣ ಎಣಿಸಲಾಗುತ್ತಿದೆ.  ಈ ನಡುವೆ 2ನೇ ಮಹಡಿಯ ಪೈಪ್ ಲೈನ್ ಮೇಲೆ ಬ್ಯಾಗೊಂದು ಪತ್ತೆಯಾಗಿದ್ದು, 14ನೇ ಮಹಡಿಯಿಂದ ಆ ಚೀಲವನ್ನು ಕೆಳಕ್ಕೆ ಎಸೆದಿರಬಹುದೆಂದು ಶಂಕಿಸಲಾಗಿದೆ.   
ಗೌಡಯ್ಯ ನಿವಾಸದ ಮೇಲೆ ರೇಡ್ 
ಬಿಡಿಎ ಮುಖ್ಯ ಇಂಜಿನಿಯರ್ ಗೌಡಯ್ಯ ಅವರ ಬಸವೇಶ್ವರನಗರ ನಿವಾಸದ ಮೇಲೆ ಎಸಿಬಿ ರೇಡ್ ಮಾಡಿದ್ದು, ಗುತ್ತಿಗೆದಾರರ ಜತೆ ಕಮೀಷನ್ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಗೌಡಯ್ಯ ಅವರಿಗೆ ಕೆಲವು ರಾಜಕಾರಣಿಗಳ ಶ್ರೀರಕ್ಷೆ ಇದ್ದಿದ್ದರಿಂದ ಬಿಡಿಎನಿಂದ ಎತ್ತಂಗಡಿ ಮಾಡಲು ಅಸಾಧ್ಯವಾಗಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಏಳು ವರ್ಷಗಳಿಂದ ಗೌಡಯ್ಯ ಬಿಡಿಎ ಅಧಿಕಾರದಲ್ಲೇ ಅಂಟಿಕೊಂಡಿದ್ದರೆಂದು ಹೇಳಲಾಗುತ್ತಿದೆ. 

 

Recent Comments

Leave Comments

footer
Top