• 18 October 2018 19:14
Jai Kannada
Jai Kannada
Blog single photo
October 04, 2018

ಕರಾವಳಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ 

ಮಂಗಳೂರು: ಮಂಗಳೂರಿನಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಬೀಳುತ್ತಿದ್ದು, ದಟ್ಟ ಮೋಡ ಕವಿದಿರುವ ಹಿನ್ನೆಲೆಯಲ್ಲಿ ಜನರು ಬೇಗ ಮನೆ ಸೇರಿಕೊಳ್ಳುವ ತವಕದಲ್ಲಿದ್ದಾರೆ. 

ದಟ್ಟ ಮೋಡ ಕವಿದ ಹಿನ್ನೆಲೆಯಲ್ಲಿ ಕತ್ತಲು ಆವರಿಸಿತ್ತು. ಸಮುದ್ರಕ್ಕಿಳಿದಿರುವ ಮೀನುಗಾರರನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದ್ದು, ನಾಳೆಯೊಳಗೆ ದೋಣಿಗಳು ವಾಪಸ್ ಬರುವ ಸಾಧ್ಯತೆಯಿದೆ.

 ಉಡುಪಿಯಲ್ಲೂ ಭಾರೀ ಮಳೆ ಬೀಳುತ್ತಿದ್ದು, ಇನ್ನಾರು ದಿನಗಳ ಕಾಲ ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Recent Comments

Leave Comments

footer
Top