• 14 December 2018 13:11
Jai Kannada
Jai Kannada
Blog single photo
October 04, 2018

ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೋಚಾರ್ ನಿವೃತ್ತಿ

ನವದೆಹಲಿ: ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೋಚಾರ್ ತಕ್ಷಣಕ್ಕೆ ಜಾರಿಯಾಗುವಂತೆ ಬ್ಯಾಂಕಿಗೆ ಪೂರ್ವಭಾವಿ ನಿವೃತ್ತಿಯನ್ನು ಕೋರಿ ಮನವಿ ಸಲ್ಲಿಸಿದ್ದಾರೆ. ಕೋಚಾರ್ ನಿವೃತ್ತಿ ಮನವಿಯನ್ನು ಬ್ಯಾಂಕಿನ ಅಧಿಕಾರ ಮಂಡಳಿ ಒಪ್ಪಿಕೊಂಡಿದೆ.

ದಾಖಲೆಯ ಪ್ರಕಾರ, ಮಂಡಳಿಯು ಅವರ ಮನವಿಯನ್ನು ತಕ್ಷಣಕ್ಕೆ ಜಾರಿಯಾಗುವಂತೆ ಒಪ್ಪಿಕೊಂಡಿದೆ. ಮಂಡಳಿ ಆಯೋಜಿಸಿದ ತನಿಖೆಗೆ ಇದರಿಂದ ಯಾವುದೇ ಪರಿಣಾಮವಿಲ್ಲ. ತನಿಖೆಯ ಫಲಿತಾಂಶವನ್ನು ಆಧರಿಸಿ ಕೆಲವು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

ಸಂದೀಪ್ ಭಕ್ಷಿ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಂಡಳಿ ನೇಮಿಸಲು ನಿರ್ಧರಿಸಿದೆ. 
ಈಗ ದಿವಾಳಿಯಾಗಿರುವ ವಿಡಿಯೊಕಾನ್ ಗ್ರೂಪ್ ಜತೆ ವ್ಯವಹಾರದಲ್ಲಿ ಕುಟುಂಬವು ಅನುಚಿತ ಅನುಕೂಲವನ್ನು ಮಾಡಿಕೊಟ್ಟಿದೆ ಎಂದು ಮಾಹಿತಿದಾರರೊಬ್ಬರು ಸರ್ಕಾರಕ್ಕೆ ವರದಿ ಮಾಡಿದ ಬಳಿಕ ಐಸಿಐಸಿಐ ಬ್ಯಾಂಕ್ ಮತ್ತು ಕೊಚಾರ್ ಕುಟುಂಬದ ಬಿಜಿನೆಸ್ ವ್ಯವಹಾರಗಳು ಸೆಬಿ ಮತ್ತಿತರ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. 

Recent Comments

Leave Comments

footer
Top