• 18 October 2018 19:25
Jai Kannada
Jai Kannada
Blog single photo
October 04, 2018

ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕುರಿತು ವೇಣು-ಗೌಡರ ಮಾತುಕತೆ

ನವದೆಹಲಿ: ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ದೇವೇಗೌಡರು ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ಮಾತುಕತೆ ನಡೆದಿದೆ. ಜೆಡಿಎಸ್‌ನಿಂದ ಒಂದು ಸ್ಥಾನ ಮತ್ತು ಕಾಂಗ್ರೆಸ್‌ಗೆ 6 ಸ್ಥಾನಗಳನ್ನು ತುಂಬಬೇಕಾಗಿದೆ.

ಸಂಪುಟ ವಿಸ್ತರಣೆ ವಿಳಂಬಗೊಳಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಾಕಾಂಕ್ಷಿಗಳಿಂದ ಬಂಡಾಯ ಮತ್ತೆ ತಲೆದೋರಬಹುದೆಂಬ ಆತಂಕವಿರುವುದರಿಂದ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದಲ್ಲದೇ ಬಿಜೆಪಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆದುಕೊಂಡು ಅದರ ಬಲ ಹೆಚ್ಚಿಸಿಕೊಳ್ಳಲು ಯತ್ನಿಸಬಹುದೆಂಬ ಅನುಮಾನವೂ ಕಾಡಿದೆ. ಇವುಗಳ ಪರಿಹಾರಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಏಕಮಾತ್ರ ಮಾರ್ಗ ಎಂಬ ಸಲಹೆ ಕೇಳಿಬರುತ್ತಿದೆ. 

Recent Comments

Leave Comments

footer
Top