• 20 October 2019 19:20
Jai Kannada
Jai Kannada
Blog single photo
October 03, 2018

ಶಿವಮೊಗ್ಗದ ಏಕೈಕ ಶಾಸಕ ಸಂಗಮೇಶ್‌ಗೆ ಸಚಿವ ಸ್ಥಾನಕ್ಕೆ ಒತ್ತಡ 

 ಇನ್ನುಳಿದಿರುವ 6 ಸಚಿವರ ಸ್ಥಾನಗಳಿಗೆ ಕಾಂಗ್ರೆಸ್ ಶಾಸಕರ ಲಾಬಿ ಶುರುವಾಗಿದೆ. ಈ ನಡುವೆ ಶಿವಮೊಗ್ಗದ ಏಕೈಕ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆಂದು ಗೊತ್ತಾಗಿದೆ.

ಸಂಗಮೇಶ್ ಅವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗಿದ್ದರೂ ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಕಾರ್ಯಕರ್ತರು ಒತ್ತಡ ಹೇರಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಂಗಮೇಶ್ ಬೆಂಬಲಿಗರು ಸಿದ್ದರಾಮಯ್ಯನ ನಿವಾಸಕ್ಕೆ ಜಮಾಯಿಸಿ ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿರಬೇಕಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಿದರೆ ಅಲ್ಲಿ ಅಭಿವೃದ್ಧಿಗೆ ನೆರವಾಗುತ್ತದೆಂದು ಅವರು ಹೇಳಿದ್ದಾರೆ. . ಸಂಗಮೇಶ್ ನಿಗಮ, ಮಂಡಳಿ ಸ್ಥಾನಮಾತ್ರ ಕೊಟ್ಟರೆ ಸಾಕಾಗುವುದಿಲ್ಲ ಎಂದು ಅವರ ಬೆಂಬಲಿಗರು ಹೇಳಿದ್ದಾರೆ. 

Recent Comments

Leave Comments

footer
Top