ಬೆಂಗಳೂರು: ದುನಿಯಾ ವಿಜಿ ಪತ್ರಿಕಾಗೋಷ್ಠಿ ಕರೆದ ಬೆನ್ನಲ್ಲೇ ಅವರ ಪರಿತ್ಯಕ್ತ ಪತ್ನಿ ನಾಗರತ್ನ ವಿಜಿ ವಿರುದ್ಧ ಗರಂ ಆಗಿದ್ದು, ತಂದೆ, ತಾಯಿ ಹೆಸರು ಹೇಳಿ ವಿಜಿ ಸಿಂಪತಿ ಗಿಟ್ಟಿಸಿಕೊಳ್ಳುವುದು ಬೇಡ. ತಂದೆ, ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎನ್ನುವುದು ಕಾರಣವೇ ಅಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅವರು ಫೈಟ್ ಮಾಡುವುದಾದರೆ ಹೆಂಡತಿ ಜತೆ ಮಾಡಲಿ. ಕೀರ್ತಿ ಜತೆ ವಿಜಿ ಮದುವೆಯೇ ಆಗಿಲ್ಲ. ನನ್ನ ಬಳಿ ರಾಜಿ ಮಾಡಿಕೊಳ್ಳೋದಕ್ಕೆ ಅವರೇ ಬಂದಿದ್ದರು. ದುನಿಯಾ ವಿಜಿ ಕೀರ್ತಿ ಜತೆ ಮದುವೆಯನ್ನೇ ಆಗಿಲ್ಲ. ಮಕ್ಕಳ ಹೆಸರಿಗೆ ಕೆಲವು ಆಸ್ತಿ ಬರೆದುಕೊಟ್ಟಿರಬಹುದು. ನನಗೇನೂ ಆಸ್ತಿ ಬರೆದುಕೊಟ್ಟಿಲ್ಲ. ಬಹಳ ಹಿಂದೆ ದುನಿಯಾ ಋಣ ಮನೆಯನ್ನು 2009ರಲ್ಲೇ ನನ್ನ ಹೆಸರಿಗೆ ಬರೆದಿದ್ದರು ಎಂದು ನಾಗರತ್ನ ಸ್ಪಷ್ಟೀಕರಣ ನೀಡಿದರು.
ದುನಿಯಾ ವಿಜಿ ಬಾಡಿಗೆ ಮನೆಯಲ್ಲಿರುವುದಾಗಿ ಹೇಳಿದ್ದಕ್ಕೆ ಸ್ಪಷ್ಟೀಕರಣ ನೀಡಿದ ಇನ್ನೂ ಅನೇಕ ಮನೆಗಳು ದುನಿಯಾ ವಿಜಿ ಹೆಸರಿನಲ್ಲಿದೆ. ಆದರೆ ಯಾರ ಹೆಸರಿನಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳೋಕೆ ಹೀಗೆ ಮಾಡುತ್ತಿದ್ದಾರೆ ಎಂದು ನಾಗರತ್ನ ಹೇಳಿದರು.
Recent Comments