• 14 December 2018 13:27
Jai Kannada
Jai Kannada
Blog single photo
October 01, 2018

ಅಡುಗೆ ಅನಿಲ, ಸಿಎನ್‌ಜಿ ದುಬಾರಿ, ಸಬ್ಸಿಡಿ ರಹಿತ ಸಿಲಿಂಡರ್ ದರ 59 ರೂ. ಏರಿಕೆ 

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ದಿನನಿತ್ಯದ ಏರಿಕೆ ಬಳಿಕ ಅಡುಗೆ ಅನಿಲದ ದರ ಏರಿಕೆ ಬಗ್ಗೆ ಜನರು ಚಿಂತೆಪಡಬೇಕಾಗಿದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ಪ್ರತೀ ಸಿಲಿಂಡರ್‌ಗೆ 59 ರೂ. ಏರಿಕೆಯಾಗಿದೆ ಮತ್ತು ಸಬ್ಸಿಡಿ ಸಹಿತ ಸಿಲಿಂಡರ್ ದರ 2.89 ರೂ. ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆ 12ಗಂಟೆಯಿಂದ ಹೆಚ್ಚುವರಿ ದರ ಜಾರಿಗೆ ಬಂದಿದೆ.

ಅಂತಾರಾಷ್ಟ್ರೀಯ ದರಗಳ ಬದಲಾವಣೆ ಮತ್ತು ವಿದೇಶಿ ವಿನಿಮಯ ಏರುಪೇರಿನಿಂದಾಗಿ ದರಗಳು ಏರಿಕೆಯಾಗಿವೆ ಎಂದು ಐಒಸಿ ತಿಳಿಸಿದೆ. ಸರಕು ಮತ್ತು ಸೇವಾ ತೆರಿಗೆಗಳು ಸಬ್ಸಿಡಿ ಸಹಿತ ಸಿಲಿಂಡರ್ ದರ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದೆ. 


 

Recent Comments

Leave Comments

footer
Top