• 24 March 2019 13:14
Jai Kannada
Jai Kannada
Blog single photo
September 06, 2018

ವಿಧಾನಸಭೆ ವಿಸರ್ಜಿಸಿದ ತೆಲಂಗಾಣ ಮುಖ್ಯಮಂತ್ರಿ 


ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗುರುವಾರ ರಾಜ್ಯಪಾಲ ನರಸಿಂಹನ್ ಅವರಿಗೆ ರಾಜ್ಯ ವಿಧಾನಸಭೆ ವಿಸರ್ಜನೆ ಮಾಡುವಂತೆ ಮನವಿ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ದಾರಿ ಕಲ್ಪಿಸಿದ್ದಾರೆ.

ರಾಜ್ಯ ಸಂಪುಟವು ಹೈದರಾಬಾದ್‌ನಲ್ಲಿ ಸೇರಿ ಸಾಂಖ್ಯಿಕ ಮತ್ತು ಜ್ಯೋತಿಷ್ಯದ ಪರಿಗಣನೆಗಳ ಬಳಿಕ ಸಂಖ್ಯೆ 6ನ್ನು ಕೆಸಿಎಆರ್ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಿ, ವಿಧಾನಸಭೆ ವಿಸರ್ಜಿಸುವುದಕ್ಕೆ ಹಸಿರುನಿಶಾನೆ ನೀಡಿದರು.

.
ರಾಜ್ಯದಲ್ಲಿ ಚುನಾವಣೆಗಳು 2019ರಲ್ಲಿ ಲೋಕಸಭೆ ಚುನಾವಣೆಗಳ ಜತೆ ನಡೆಯಲು ನಿಗದಿಯಾಗಿತ್ತು. ಆದರೆ ಕಳೆದ ವಾರ ನಡೆದ ಬೃಹತ್ ರಾಜಕೀಯ ಸಭೆಯಲ್ಲಿ, ಜನರ ಸೇವೆ ಮುಂದುವರಿಸಲು ಹೊಸ ಜನಾದೇಶ ಕೋರಿದರು. ಪ್ರಜಾಲಾ ಆಶೀರ್ವಾದ ಸಭಾ ಎಂದು ಕರೆಯುವ ಸಭೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು ಮತ್ತು ಕೇಂದ್ರದಿಂದ ನೆರವಿನಿಂದ ಆಚೆ ರಾಜ್ಯವು ನೋಡುವುದಕ್ಕೆ ಇದು ಸಕಾಲ ಎಂದು ಕೆಸಿಆರ್ ತಿಳಿಸಿದರು.

ತಮಿಳುನಾಡಿಲ್ಲಿ ಜನರು ತಮ್ಮ ರಾಜ್ಯವನ್ನು ಸ್ಥಳೀಯ ನಾಯಕರ ನೆರವಿನೊಂದಿಗೆ ಆಳುತ್ತಾರೆ. ಇದೇ ರೀತಿ ನಾವು ಸಹ ಅಧಿಕಾರ ಉಳಿಸಿಕೊಂಡು ದೆಹಲಿಯ ನಾಯಕತ್ವಕ್ಕೆ ಶರಣಾಗಬಾರದು ಎಂದು ನುಡಿದರು.

ಲೋಕಸಭೆ ಚುನಾವಣೆ ಜತೆಗೆ ರಾಜ್ಯ ಚುನಾವಣೆ ನಡೆಸಿದರೆ, ರಾಜ್ಯದ ಜನತೆ ತಮ್ಮ ಸ್ವಂತ ಸರ್ಕಾರಕ್ಕೆ ಮತ ಚಲಾಯಿಸುವುದರ ಮೇಲೆ ಪರಿಣಾಮ ಬೀರಬಹುದೆಂದು ಭಯದಿಂದ ಚುನಾವಣೆಯನ್ನು ಮುಂಚಿತವಾಗಿ ನಡೆಸುವ ನಿರ್ಧಾರಕ್ಕೆ ಬರಲಾಗಿದೆಯೆಂದು ಶಂಕಿಸಲಾಗಿದೆ. ಲೋಕಸಭೆ ಚುನಾವಣೆ ಜತೆಗೆ ರಾಜ್ಯಸಭೆ ಚುನಾವಣೆ ನಡೆದರೆ ಸ್ಥಳೀಯ ವಿಷಯಗಳು ಮರೆಯಾಗಬಹುದೆಂಬ ಭಯ ಸರ್ಕಾರವನ್ನು ಆವರಿಸಿದೆ. ಈಗ ವಿಧಾನಸಭೆ ವಿಸರ್ಜಿಸಿರುವುದರಿಂದ ಮಿಜೋರಾಂ, ಮಧ್ಯಪ್ರದೇಶ, ಚತ್ತೀಸ್‌ಗಢ ಮತ್ತು ರಾಜಸ್ಥಾನದ ಜತೆ ಚುನಾವಣೆಗೆ ಆಯೋಗ ಅನುಮತಿ ನೀಡುತ್ತದೆಂದು ಕೆಸಿಆರ್ ಆಶಿಸಿದ್ದಾರೆ.
 

Recent Comments

Leave Comments

footer
Top