ಗುವಾಹಟಿ: 40 ಪ್ರಯಾಣಿಕರನ್ನು ಒಯ್ಯುತ್ತಿದ್ದ ಯಾಂತ್ರಿಕ ದೋಣಿಯೊಂದು ಮತ್ತು 8 ದ್ವಿಚಕ್ರವಾಹನಗಳು ಗುವಾಹಟಿ ಬಳಿಕ ಮಧ್ಯಾಹ್ನ 1.30ಕ್ಕೆ ಬ್ರಹ್ಮಪುತ್ರಾ ನದಿಯಲ್ಲಿ ಮುಳುಗಿವೆ. ಸುಮಾರು 12 ಪ್ರಯಾಣಿಕರು ಸುರಕ್ಷಿತವಾಗಿ ಈಜಿ ದಡ ಸೇರಿದ್ದರೆ, ಬಹುತೇಕ ಮಹಿಳೆಯರು ಮತ್ತು ಮಕ್ಕಳಿಂದ ಕೂಡಿದ ದೋಣಿಯಲ್ಲಿದ್ದ ಉಳಿದ 26 ಜನರು ಇನ್ನೂ ನಾಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ತಕ್ಷಣವೇ 25 ಸದಸ್ಯರ ತಂಡದ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸುಮಾರು 2 ಗಂಟೆಗಳ ಬಳಿಕ ಈಜುಗಾರರು ಬಾಲಕಿಯೊಬ್ಬಳ ದೇಹವನ್ನು ನೀರಿನಿಂದ ಹೊರತೆಗೆದಿದ್ದು, ತುಂಬಿ ಹರಿಯುತ್ತಿರುವ ನದಿಯಲ್ಲಿ ಶೋಧಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಗುವಾಹಟಿಯಿಂದ ಉತ್ತರ ಗುವಾಹಟಿ ಕಡೆಗೆ ದೋಣಿ ಪ್ರಯಾಣಿಸುತ್ತಿದ್ದಾಗ, ದಿಢೀರನ್ ಎಂಜಿನ್ ಸ್ಥಗಿತಗೊಂಡು ದಡದಿಂದ 200 ಮೀಟರ್ ದೂರದಲ್ಲಿ ಮುಳುಗಿತು.
ಬದುಕುಳಿದ ಉತ್ಪಾಲ್ ಚಮುವಾ ರಕ್ಷಣಾ ದೋಣಿಯೊಳಕ್ಕೆ ಜಿಗಿದು ಜೀವವುಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ನಾವು ರಕ್ಷಣಾ ದೋಣಿಯಿಂದ ಜೀವರಕ್ಷಕ ಜ್ಯಾಕೆಟ್ಗಳನ್ನು ಈಜಲು ಪ್ರಯತ್ನಿಸುತ್ತಿದ್ದ ಜನರತ್ತ ಎಸೆದೆವು. ಕಂಕುಳಲ್ಲಿ ಮಗುವನ್ನು ಹಿಡಿದುಕೊಂಡು ಈಜುತ್ತಿದ್ದ ಮಹಿಳೆಯೊಬ್ಬಳನ್ನು ಪಾರು ಮಾಡಿದ್ದಾಗಿ ಅವರು ತಿಳಿಸಿದರು. ಸುಮಾರು 40 ಜನರುನ್ನು ದೋಣಿ ಒಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Recent Comments