• 19 March 2019 05:20
Jai Kannada
Jai Kannada
Blog single photo
August 08, 2018

ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಮೆರೀನಾ ಬೀಚ್‌ನಲ್ಲಿ ಜಾಗ ಬಿಡದ ಸರ್ಕಾರ 

ಚೆನ್ನೈ: ಸುದೀರ್ಘ ಕಾಲದ ಕಾಯಿಲೆ ಬಳಿಕ ಮಂಗಳವಾರ ನಿಧನರಾದ ದ್ರಾವಿಡ ಕಣ್ಮಣಿ ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಜನರು ರಾಜಾಜಿ ಹಾಲ್‌ನಲ್ಲಿ ಬೆಳಿಗ್ಗೆಯಿಂದಲೂ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಉಪಸ್ಪೀಕರ್ ತಂಬಿದುರೈ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತವರ ಕುಟುಂಬ ಕರುಣಾನಿಧಿಗೆ ಅಂತಿಮ ನಮನ ಸಲ್ಲಿಸಿದರು.

ಪಳನಿ ಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಕರುಣಾನಿಧಿ ಪುತ್ರ ಸ್ಟಾಲಿನ್ ಜತೆ ಸಂಕ್ಷಿಪ್ತವಾಗಿ ಮಾತನಾಡಿ ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದರು.ಪ್ರಧಾನಿ ನರೇಂದ್ರ ಮೋದಿ ಕಲೈಗ್ನಾರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಕರುಣಾನಿಧಿ ಪಾರ್ಥಿವ ಶರೀರಕ್ಕೆ ದಿನದ ಕೊನೆಯಲ್ಲಿ ಬಂದು ಅಂತಿಮ ನಮನ ಸಲ್ಲಿಸಲಿದ್ದಾರೆ.

 ಈ ನಡುವೆ ಎಐಎಡಿಎಂಕೆ ಸರ್ಕಾರ ಸರ್ದಾರ್ ಪಟೇಲ್ ರಸ್ತೆಯಲ್ಲಿ ಮಾಜಿ ಸಿಎಂಗಳಾದ ಸಿ.ರಾಜಗೋಪಾಲಚಾರಿ ಮತ್ತು ಕೆ.ಕಾಮರಾಜ್ ಸ್ಮಾರಕಗಳ ಬಳಿ ಕರುಣಾನಿಧಿ ಸಮಾಧಿಗೆ ಜಾಗ ನೀಡುವುದಾಗಿ ತಿಳಿಸಿದ್ದಾರೆ. ಆದರೆ  ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರವಾಗಬೇಕು ಎಂದು ರಾಹುಲ್ ಗಾಂಧಿ, ರಜನಿ ಕಾಂತ್ ಒತ್ತಾಯಿಸಿದ್ದಾರೆ.

ಜಯಲಲಿತಾ ಹಾಗೂ ರೀತಿಯಲ್ಲಿ ಕಲೈಗ್ನಾರ್ ಕೂಡ ತಮಿಳುಜನರ ಧ್ವನಿಯಾಗಿದ್ದರು.ಆದ್ದರಿಂದ ಮರೀನಾ ಬೀಚ್‌ನಲ್ಲೇ ಅವರ ಸಮಾಧಿಗೆ ಸ್ಥಳಾವಕಾಶ ಕಲ್ಪಿಸಬೂೇಕೆಂದು ಅನೇಕ ಜನರ ಒಕ್ಕೊರಲಿನ ಒತ್ತಾಯವಾಗಿದೆ. ಆದರೆ ಎಐಎಡಿಎಂಕೆ  ಸರ್ಕಾರ ಮಾತ್ರ ಮರೀನ್ ಬೀಚ್‌ನಲ್ಲಿ ಕರುಣಾನಿಧಿ ಸಮಾಧಿ ನಿರ್ಮಾಣಕ್ಕೆ ಆಕ್ಷೇಪವೆತ್ತಿದ್ದು, ಹೈಕೋರ್ಟ್‌ನಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ.

Recent Comments

Leave Comments

footer
Top