• 11 December 2018 15:42
Jai Kannada
Jai Kannada
Blog single photo
July 31, 2018

ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ 

ಬೆಂಗಳೂರು: ಸಾಲ ಮನ್ನಾ ಮೊದಲಾದ ಕ್ರಮಗಳಿಂದ ಬೊಕ್ಕಸದ ಮೇಲೆ ಭಾರೀ ಹೊರೆ ಉಂಟಾಗಿರುವುದರಿಂದ ಕುಮಾರಸ್ವಾಮಿ ಸರ್ಕಾರ ಸರ್ಕಾರದಲ್ಲಿ ಯಾವುದೇ ದುಂದುವೆಚ್ಚ ಮಾಡದಂತೆ ಮಿತವ್ಯಯ ಕ್ರಮ ಅನುಸರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಪತ್ರಿಕಾ ಮತ್ತು ಟಿವಿ ಮಾಧ್ಯಮಗಳಿಗೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾಹೀರಾತಿನ ಹೊಳೆಯನ್ನು ಹರಿಸಿದ ಹಾಗೆ ಮಾಡಲು ಕುಮಾರಸ್ವಾಮಿ ಹಿಂದೇಟು ಹಾಕಿದ್ದಾರೆ.

ಜಾಹೀರಾತಿನ ಮೂಲಕ ಸರ್ಕಾರದ ಬೊಕ್ಕಸವನ್ನು ಪೋಲು ಮಾಡುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ. ಇದಲ್ಲದೇ ಕುಮಾರಸ್ವಾಮಿ ಮಾಡಿದ ಇನ್ನೊಂದು ಒಳ್ಳೆ ಕೆಲಸವೇನೆಂದರೆ ಸಚಿವಸ್ಥಾನ ಇರುವವರಿಗೆ ಮಾತ್ರ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು. ಸಚಿವರಲ್ಲದವರನ್ನು ಉಸ್ತುವಾರಿ ಸಚಿವರಾಗಿ ನೇಮಿಸಿದ್ದರೆ ಅವರಿಗೆ ಬಹುಶಃ ಎಲ್ಲಾ ಸವಲತ್ತುಗಳನ್ನು ಕೊಡಬೇಕಾಗುವುದರಿಂದ ಸಚಿವ ಸ್ಥಾನ ಹೊಂದಿರುವವರನ್ನು ಮಾತ್ರ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಉಸ್ತುವಾರಿ ಸಚಿವರ ಪಟ್ಟಿ ಇಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಿಗೂ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ.

ಇನ್ನು ನಿಗಮ, ಮಂಡಳಿಗಳಿಗೆ ಶಾಸಕರನ್ನು ನೇಮಿಸುವುದರಿಂದ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಬೇಕಾಗುತ್ತದೆ. ಇದರಿಂದ ಬೊಕ್ಕಸಕ್ಕೆ ಇನ್ನಷ್ಟು ಹೊರೆಬೀಳುವುದಂತೂ ಗ್ಯಾರಂಟಿ. ಈ ಸಮಸ್ಯೆಯನ್ನು ಕುಮಾರಸ್ವಾಮಿ ಹೇಗೆ ನಿಭಾಯಿಸುತ್ತಾರೆಂದು ಕಾದುನೋಡಬೇಕು. ಈ ನಡುವೆ ನಿಗಮ, ಮಂಡಳಿಗಳನ್ನು ಸಾಕುವುದು ಬಿಳಿಆನೆ ಸಾಕಿದಂತೆ. ಅವುಗಳಿಂದ ಜನರಿಗೆ ಯಾವುದೇ ಲಾಭವಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಸಚಿವ ಸ್ಥಾನವಂಚಿತರಾಗಿ ಬೂದಿ ಮುಚ್ಚಿದ ಕೆಂಡದಂತಿರುವ ಅತೃಪ್ತರ ಕೋಪ ತಣಿಸಲು ಯಾವುದಾದರೂ ಒಂದು ಹುದ್ದೆ ಕೊಡಲೇಬೇಕಾದ ಸ್ಥಿತಿಯಲ್ಲಿ ಕುಮಾರಸ್ವಾಮಿ ಇದ್ದಾರೆ. 

 ಉಸ್ತುವಾರಿ ಸಚಿವರ ಪಟ್ಟಿ ಕೆಳಕಂಡಂತಿದೆ
ಡಾ. ಜಿ. ಪರಮೇಶ್ವರ್- ಬೆಂಗಳೂರು ನಗರ, ತುಮಕೂರು
ಡಿಕೆ. ಶಿವಕುಮಾರ್-ರಾಮನಗರ, ಬಳ್ಳಾರಿ
ಕೃಷ್ಣಭೈರೇಗೌಡ- ಬೆಂಗಳೂರು ಗ್ರಾಮಾಂತರ, ಕೋಲಾರ
ಯು. ಟಿ. ಖಾದರ್ - ದಕ್ಷಿಣ ಕನ್ನಡ
ಪುಟ್ಟರಂಗಶೆಟ್ಟಿ - ಚಾಮರಾಜನಗರ
ಜಮೀರ್ ಅಹಮದ್ - ಹಾವೇರಿ
ಜಯಮಾಲಾ - ಉಡುಪಿ

ಶಿವಶಂಕರ ರೆಡ್ಡಿ - ಚಿಕ್ಕಬಳ್ಳಾಪುರ
ವೆಂಕಟರಾವ್ ನಾಡಗೌಡ-ರಾಯಚೂರು
ಎಸ್. ಆರ್. ಶ್ರೀನಿವಾಸ್ - ದಾವಣಗೆರೆ
ಡಿ. ಸಿ. ತಮ್ಮಣ್ಣ - ಶಿವಮೊಗ್ಗ
ಎಂ. ಸಿ. ಮನಗೊಳಿ - ಬಿಜಾಪುರ
ಜಿ.ಟಿ. ದೇವೇಗೌಡ - ಮೈಸೂರು

ಆರ್. ಶಂಕರ್ - ಕೊಪ್ಪಳ
ಸಿ. ಎಸ್. ಪುಟ್ಟರಾಜು - ಮಂಡ್ಯ
ಸಾ. ರಾ. ಮಹೇಶ್ - ಕೊಡಗು
ಬಂಡೆಪ್ಪ ಕಾಶಂಪುರ್- ಬೀದರ್
ಹೆಚ್. ಡಿ. ರೇವಣ್ಣ - ಹಾಸನ
ಎನ್. ಮಹೇಶ್ ಗದಗ
ಕೆ.ಜೆ.ಜಾರ್ಜ್- ಚಿಕ್ಕಮಗಳೂರು
ರಮೇಶ್ ಜಾರಕಿಹೊಳಿ- ಬೆಳಗಾವಿ. 
ಶಿವಾನಂದಪಾಟೀಲ್- ಬಾಗಲಕೋಟೆ
ಪ್ರಿಯಾಂಕ್ ಖರ್ಗೆ-ಕಲಬುರ್ಗಿ
ರಾಜಶೇಖರ ಪಾಟೀಲ್ - ಯಾದಗಿರಿ
ವೆಂಕಟರಮಣಪ್ಪ - ಚಿತ್ರದುರ್ಗ
 

Recent Comments

Leave Comments

footer
Top