• 16 October 2018 09:08
Jai Kannada
Jai Kannada
Blog single photo
July 31, 2018

 ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಪ್ರಸ್ತಾಪಕ್ಕೆ ಪುನಶ್ಚೇತನ

ಬೆಂಗಳೂರು: ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಒತ್ತಾಯವನ್ನು ಶಮನಗೊಳಿಸಲು ಸಿಎಂ ಕುಮಾರಸ್ವಾಮಿ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದು, ಈ ದಿಸೆಯಲ್ಲಿ ಒಂದು ಹೆಜ್ಜೆ ಇರಿಸಿದ್ದಾರೆ. ಅದು ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಬೇಕೆಂಬ ಪ್ರಸ್ತಾಪಕ್ಕೆ ಪುನಶ್ಚೇತನ ನೀಡುವುದು.  ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಮಾಡಬೇಕೆಂಬ ದಶಕಗಳ ಹಿಂದಿನ ಕೂಗಿಗೆ ಕುಮಾರಸ್ವಾಮಿ ಧ್ವನಿ ನೀಡುವ  ಮೂಲಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಅಡಗಿಸಲು ಅವರು ಹೊರಟಿದ್ದಾರೆ. 

. ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆ ಕುರಿತ ದಿನವಿಡೀ ಬೆಳವಣಿಗೆ ಬಳಿಕ ಮಾಧ್ಯಮದ ಜತೆ ಮಾತನಾಡುತ್ತಾ, 2006ರಲ್ಲಿ ನಾನು ಮುಖ್ಯಮಂತ್ರಿಯಾದಾಗಿನಿಂದ ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಮಾಡಬೇಕೆಂಬ ಘೋಷಣೆ ಬಾಕಿವುಳಿದಿದೆ. ನಾನು ಈ ಪ್ರಸ್ತಾಪವನ್ನು ಮರುಪರಿಶೀಲನೆ ಮಾಡಿ ಅದರ ಕಾರ್ಯಸಾಧ್ಯತೆಗಳ ಬಗ್ಗೆ ಚರ್ಚಿಸುವುದಾಗಿ ಕುಮಾರಸ್ವಾಮಿ ಹೇಳಿದರು.

ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿಸುವ ನಿಟ್ಟಿನಲ್ಲಿ ಕೆಲವು ಇಲಾಖೆಗಳನ್ನು ಬಿಳಿ ಆನೆ ಸುವರ್ಣ ಸೌಧಕ್ಕೆ ವರ್ಗಾಯಿಸುತ್ತೇವೆ. ಸುವರ್ಣಸೌಧವನ್ನು 10 ದಿನಗಳ ಕಾಲ ತೆರೆದಿಡುವ ಬದಲಿಗೆ 365 ದಿನವೂ ತೆರೆದಿಡಲು ಇಚ್ಛಿಸಿದ್ದೇನೆ. ಉತ್ತರಕರ್ನಾಟಕದ ಅಭಿವೃದ್ಧಿಗೆ ಕೆಲವು ಇಲಾಖೆಗಳನ್ನು ಅಲ್ಲಿಗೆ ಸ್ಥಳಾಂತರಿಸುವುದಾಗಿ ಅವರು ಹೇಳಿದರು. ಕಲ್ಬುರ್ಗಿ, ಬೆಳಗಾವಿ ಅಥವಾ ಹುಬ್ಬಳ್ಳಿಯ ಜನರು ಸಣ್ಣ ವಿಷಯಕ್ಕೂ ಬೆಂಗಳೂರಿಗೆ ಬರುವ ಅಗತ್ಯವಿಲ್ಲದಂತೆ ಖಾತರಿ ಮಾಡುವುದಾಗಿ ಅವರು ಭರವಸೆ ನೀಡಿದರು.

Recent Comments

Leave Comments

footer
Top