• 17 December 2018 12:53
Jai Kannada
Jai Kannada
Blog single photo
July 29, 2018

ಅವಳಿ ಮಕ್ಕಳನ್ನು ಕ್ಯಾನ್ಸರ್ ಸೋಂಕಿನಿಂದ ಪಾರು ಮಾಡಿದ ಮಹಿಳೆ 

ಮುಂಬೈ: ಕಳೆದ 8 ವರ್ಷಗಳಿಂದ ತಾನು ಕ್ಯಾನ್ಸರ್ ಉಂಟುಮಾಡುವ ಬಿಆರ್‌ಸಿಎಐ ರೂಪಾಂತರ ಹೊಂದಿರುವುದು ತಿಳಿದಿದ್ದ ಬೆಂಗಳೂರಿನ ಸ್ವಯ ಪ್ರಭಾ ಎಂಬ ಮಹಿಳೆ ತನ್ನ ಮಕ್ಕಳಿಗೆ ಈ ಕ್ಯಾನ್ಸರ್ ಸೋಂಕು ತಟ್ಟದಂತೆ ಮಾಡಲು ನಿರ್ಧರಿಸಿದರು. ಅದಕ್ಕಾಗಿ ಅವರು ದಕ್ಷಿಣ ಮುಂಬೈನ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿಕೃತಿ ಇಲ್ಲದ ಅವಳಿ ಮಕ್ಕಳಿಗೆ ಜನ್ಮನೀಡುವ ಮೂಲಕ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಮಕ್ಕಳ ಜೀವವುಳಿಸಿದರು.

ನನ್ನ ತಾಯಿಗೆ ಕ್ಯಾನ್ಸರ್ ಇದ್ದಿತ್ತು. ಇದರ ಜತೆಗೆ ನನ್ನ ತಾಯಿ ಸೋದರಿಯರಿಬ್ಬರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ನನಗೆ ಕೂಡ ಕ್ಯಾನ್ಸರ್ ಅಪಾಯಕ್ಕೆ ಗುರಿಮಾಡುವ ಬಿಆರ್‌ಸಿಎಐ ರೂಪಾಂತರವಿತ್ತು. ಆದರೆ ಈ ಕ್ಯಾನ್ಸರ್ ಚಕ್ರ ನನ್ನ ಜತೆಗೆ ಕೊನೆಯಾಗಬೇಕೆಂದು ನಾನು ನಿರ್ಧರಿಸಿದೆ. ಅದಕ್ಕಾಗಿಯೇ ನನ್ನ ಮಕ್ಕಳಿಗೂ ಕ್ಯಾನ್ಸರ್ ಸೋಂಕು ಉಂಟಾಗದಂತೆ ನೋಡಿಕೊಂಡೆ ಎಂದು ಜಸ್ಲೋಕ್ ಆಸ್ಪತ್ರೆಯಲ್ಲಿ ತಾಯಿ ಹೇಳಿದಾಗ ಅವರ ಮುಖದಲ್ಲಿ ಸಂತೃಪ್ತಿಯ ಭಾವವಿತ್ತು.

ಸ್ವಯಂ ಪ್ರಕರಣದಲ್ಲಿ ಐವಿಎಫ್ ತಜ್ಞರಾದ ಡಾ. ಫಿರುಜಾ ಪಾರಿಖ್ ಮತ್ತು ಅವರ ತಂಡ ಕಸಿ ಪೂರ್ವ ತಳಿ ಪರೀಕ್ಷೆ ನಡೆಸಿ ಬಿಆರ್‌ಸಿಎಐ ರೂಪಾಂತರ ಹೊಂದಿರದ ಭ್ರೂಣಗಳನ್ನು ಮಾತ್ರ ಮಹಿಳೆಯ ಗರ್ಭಕೋಶಕ್ಕೆ ವರ್ಗಾಯಿಸಿದ್ದರು. ಐವಿಎಫ್ ಮುಖಾಂತರ ನಾವು 6 ಭ್ರೂಣಗಳನ್ನು ತಯಾರಿಸಲು ಸಾಧ್ಯವಾಯಿತು ಎಂದು ಫರ್ಟಿಲ್ ಟ್ರೀ ಜಸ್ಲೋಕ್ ಪಲವತ್ತತೆ ಕೇಂದ್ರದ ಪಾರಿಖ್ ತಿಳಿಸಿದ್ದಾರೆ. ಎರಡು ಭ್ರೂಣಗಳು ಕಾರ್ಯಸಾಧ್ಯವಾಗಿರಲಿಲ್ಲ. ಎರಡು ಭ್ರೂಣಗಳು ರೂಪಾಂತರ(ವಿಕೃತಿ) ಒಳಗೊಂಡಿದ್ದು, ಇನ್ನುಳಿದ 2 ಭ್ರೂಣಗಳಲ್ಲಿ ರೂಪಾಂತರ ಇರಲಿಲ್ಲ ಎಂದು ಹೇಳಿದ್ದಾರೆ.

 

 

Recent Comments

Leave Comments

footer
Top