• 16 February 2019 13:39
Jai Kannada
Jai Kannada
Blog single photo
July 21, 2018

ಅನೇಕ ಉತ್ಪನ್ನಗಳ ಮೇಲೆ ಜಿಎಸ್‌ಟಿ ಕಡಿತ ಮಾಡಿದ ಸರ್ಕಾರ 

ನವದೆಹಲಿ: ಜಿಎಸ್‌ಟಿ ಮಂಡಳಿ ದಿನನಿತ್ಯ ಬಳಸುವ ಸಲಕರಣೆಗಳು ಮತ್ತು ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಇಳಿಸಿದ್ದು, ಸ್ಯಾನಿಟರ್ ಪ್ಯಾಡ್‌ಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಿದೆ. ಸ್ಯಾನಿಟರಿ ಪ್ಯಾಡ್ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೂನ್ಯಕ್ಕೆ  ಇಳಿಸಿದ್ದು, ರಾಖಿಗಳಿಗೆ ಕೂಡ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ವಿತ್ತ ಸಚಿವ ಪಿಯುಶ್ ಗೋಯಲ್ ವರದಿಗಾರರಿಗೆ ತಿಳಿಸಿದರು.

ಜಿಎಸ್‌ಎಸ್‌ಟಿ ದರ ಕಡಿಮೆ ಮಾಡಿದ ಇತರೆ ವಸ್ತುಗಳು ಪಾದರಕ್ಷೆ, ಸಣ್ಣ ಟಿವಿಗಳು, ನೀರಿನ ಹೀಟರ್, ರೆಫ್ರಿಜಿರೇಟರ್‌ಗಳು, ಲಿಥಿಯಮ್ ಅಯಾನ್ ಬ್ಯಾಟರಿಗಳು, ಹೇರ್ ಡ್ರೈಯರ್‌ಗಳು, ವ್ಯಾಕ್ಯುಮ್ ಕ್ಲೀನರ್‌ಗಳು, ಆಹಾರ ಸಲಕರಣೆಗಳು ಮತ್ತು ಎಥಾನಲ್.

ಎಥಾನಲ್ ಮೇಲಿನ ತೆರಿಗೆಯನ್ನು ಶೇ. 5ರಷ್ಟು ಕಡಿತಮಾಡಲಾಗಿದ್ದು, ಸಣ್ಣ ಕರಕುಶಲ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಪಿಯುಶ್ ಗೋಯಲ್ ತಿಳಿಸಿದ್ದಾರೆ.

Recent Comments

Leave Comments

footer
Top