• 19 March 2019 06:03
Jai Kannada
Jai Kannada
Blog single photo
July 20, 2018

ಭಾರತ ಗಡಿ ದಾಟಿದ ಸಾವಿರಾರು ಚೀನಿ ಸೈನಿಕರು: ರಾಹುಲ್ ಆರೋಪ  

 ನವದೆಹಲಿ: ಚೀನಾದ ಸೈನಿಕರು ಡೋಕ್ಲಾ ಗಡಿಯನ್ನು ದಾಟುತ್ತಿದ್ದಾಗ ಪ್ರಧಾನಿ ಮೋದಿ ಯಾವುದೇ ಅಜೆಂಡಾವಿಲ್ಲದೇ ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾದ ಅಧ್ಯಕ್ಷರ ಜತೆ ಜೋಕಾಲಿ ಆಡುತ್ತಿದ್ದಾಗ ಸಾವಿರಾರು ಸೈನಿಕರು ಭಾರತದ ಗಡಿ ದಾಟಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.  ಸೈನಿಕರಿಗೆ ಪ್ರಧಾನಿ ಮೋಸ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ತೀಕ್ಷ್ಣವಾಗಿ ಟೀಕಿಸಿದರು.

ಚೀನಾಗೆ ಹೋಗಿದ್ದ ಪ್ರಧಾನಿ ಈ ಬಗ್ಗೆ ಚಕಾರವೆತ್ತಿಲ್ಲ ಎಂದರು.ಪ್ರಧಾನಿಗಳಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ. ಉದ್ಯಮಿಗಳ ಬಹುಕೋಟಿ ಸಾಲವನ್ನು ಪ್ರಧಾನಿ ಮೋದಿ ಮನ್ನಾ ಮಾಡಿದ್ದಾರೆ.ರೈತರು ಸಾಲ ಮನ್ನಾ ಮಾಡುವಂತೆ ಕೈಮುಗಿದು ಕೇಳುತ್ತಿದ್ದಾರೆ ಆದರೆ ರೈತರ ಸಾಲ ಮನ್ನಾ ಮಾಡಲು ಪ್ರಧಾನಿ ಮನಸ್ಸು ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. 

ಮೋದಿ ಚೌಕಿದಾರ್ ಅಲ್ಲ, ಭಾಗಿದಾರ್ ಎಂದು ಟೀಕಿಸಿದರು. ರಾಫೆಲ್ ಯುದ್ಧವಿಮಾನದ ಖರೀದಿ ಕುರಿತೂ ರಾಹುಲ್ ಪ್ರಸ್ತಾಪ ಮಾಡಿದರು. ಇಡೀ ವಿಶ್ವದಲ್ಲಿ ಪೆಟ್ರೋಲ್ ದರ ಕಡಿಮೆಯಿದೆ. ಆದರೆ ದೇಶದಲ್ಲಿ ಮಾತ್ರ ಪೆಟ್ರೋಲ್ ದರ ಏರುತ್ತಿದೆ ಎಂದು ರಾಹುಲ್ ಪೆಟ್ರೋಲ್ ದರ ಏರಿಕೆ ಕುರಿತು ಪ್ರಸ್ತಾಪಿಸಿದರು..  ಈ ನಡುವೆ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 1.45ಕ್ಕೆ ಮುಂದೂಡುವ ಮೂಲಕ ಲೋಕಸಭೆಯಲ್ಲಿ ರಾಹುಲ್ ಭಾಷಣದ ವಿರುದ್ಧ ಬಿಜೆಪಿ ಗದ್ದಲಕ್ಕೆ ಬ್ರೇಕ್ ಹಾಕಿದರು. 

Recent Comments

Leave Comments

footer
Top