• 19 March 2019 05:35
Jai Kannada
Jai Kannada
Blog single photo
July 13, 2018

 ನವಾಜ್ ಷರೀಫ್ ಸ್ವದೇಶಕ್ಕೆ ಕಾಲಿಟ್ಟ ಕೂಡಲೇ ಬಂಧನ ಸಾಧ್ಯತೆ 

ಲಾಹೋರ್: ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನವಾಜ್ ಷರೀಫ್ ಮತ್ತು ಅವರ ಪುತ್ರಿ ಲಂಡನ್‌ನಿಂದ ಈಗ ಅಬುಧಾಬಿಗೆ ಬಂದಿಳಿದಿದ್ದು, ಅಲ್ಲಿಂದ ಪಾಕಿಸ್ತಾನದಲ್ಲಿ ಇಳಿಯಲಿದ್ದಾರೆ.

ವಿಮಾನನಿಲ್ದಾಣದಲ್ಲಿ ಇಳಿದ ಕೂಡಲೇ ನವಾಜ್ ಷರೀಪ್ ಮತ್ತು  ಅವರ ಪುತ್ರಿಯನ್ನು ಕೂಡ ಬಂಧಿಸಲಾಗುತ್ತದೆಂದು ತಿಳಿದುಬಂದಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ  ಪೊಲೀಸರು ಅವರ ಬಂಧನಕ್ಕೆ ಸಿದ್ಧವಾಗಿದ್ದಾರೆ. ನನ್ನನ್ನು ನೇರವಾಗಿ ಜೈಲಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಷರೀಫ್ ಹೇಳಿದ್ದಾರೆ. ತಮ್ಮನ್ನು ಬಂಧಿಸಿದರೆ ಅನುಕಂಪದ ಅಲೆ ತಮ್ಮ ಪರವಾಗಿ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಷರೀಫ್ ಇದ್ದಾರೆ.

ಈಗ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೇರವಾಗಿ ಅವರು ಪಾಕಿಸ್ತಾನಕ್ಕೆ ಬರಲು ನಿರ್ಧರಿಸಿದ್ದಾರೆ. ನವಾಜ್ ಷರೀಫ್ ಅವರು ಭಾರತದ ಜತೆ ಉತ್ತಮ ಬಾಂಧವ್ಯ ಕುದುರಿಸಿ ತಮ್ಮ ಪುತ್ರಿಯ ಮದುವೆಗೆ ನರೇಂದ್ರ ಮೋದಿಗೆ ಆಹ್ವಾನಿಸಿದ್ದು, ಪಾಕಿಸ್ತಾನದ ಸೇನೆಯ ಕೆಂಗಣ್ಣಿಗೆ ಗುರಿಯಾಗಿತ್ತು. 
 

Recent Comments

Leave Comments

footer
Top