• 19 March 2019 05:33
Jai Kannada
Jai Kannada
Blog single photo
July 08, 2018

ಅಮೆರಿಕ ಕನ್ಸಾಸ್‌ನಲ್ಲಿ ಇನ್ನೊಬ್ಬ ಟೆಕ್ಕಿ ಗುಂಡಿಗೆ ಬಲಿ 

ಕನ್ಸಾಸ್: ಹೈದರಾಬಾದ್‌ನ 26 ವರ್ಷ ವಯಸ್ಸಿನ ಟೆಕ್ಕಿ ಶರತ್ ಕೊಪ್ಪು ಎಂಬವರಿಗೆ ಕನ್ಸಾನ್ ರೆಸ್ಟೊರೆಂಟ್‌ನಲ್ಲಿ ಕೆಲವು ಅಜ್ಞಾತ ಬಂದುೂಕುಧಾರಿಗಳು ಶುಕ್ರವಾರ ಗುಂಡಿಕ್ಕಿದ ಭೀಕರ ಘಟನೆ ಸಂಭವಿಸಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ಗುಂಡೇಟಿನ ಗಾಯಗಳಿಂದ ಮೃತಪಟ್ಟಿದ್ದಾರೆ.

ತೆಲುಗು ಟೆಕ್ಕಿ ಶ್ರೀನಿವಾಸ ಕುಚಿಬೋಟಿಯಾ ಅವರನ್ನು ಕಳೆದ ವರ್ಷ ಗುಂಡಿಕ್ಕಿದ  ಘಟನೆ ಹಸಿರಾಗಿರುವಾಗಲೇ ಇನ್ನೊಬ್ಬ ಭಾರತೀಯ ಟೆಕ್ಕಿಗೆ ಅಮೆರಿಕದಲ್ಲಿ ಗುಂಡಿಕ್ಕಲಾಗಿದೆ.  ಕುಚಿಬೋಟಿಯಾಗೆ ಗುಂಡಿಕ್ಕಿದ ಸ್ಥಳವಾದ ಕನ್ಸಾಸ್ ಬಾರ್ ಕೊಪ್ಪುಗೆ ಗುಂಡಿಕ್ಕಿದ ಸ್ಥಳದಿಂದ ಕೇವಲ 41 ಕಿಮೀ ದೂರದಲ್ಲಿದೆ. ಕೊಪ್ಪು ಅವರು ಅಮೆರಿಕಕ್ಕೆ 2 ತಿಂಗಳ ಕೆಳಗೆ ತೆರಳಿದ್ದು, ಅಲ್ಲಿ ಕನ್ಸಾನ್ ಮಿಸ್ಸೌರಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದರು. ಸಂಜೆ 7 ಗಂಟೆಗೆ(ಸ್ಥಳೀಯ ಕಾಲಮಾನ)  ಫಿಷ್ ಮತ್ತು ಚಿಕನ್ ಮಾರುಕಟ್ಟೆಯಲ್ಲಿ ಈ ಘಟನೆ ಜರುಗಿದ್ದು, ಬಂದೂಕುಧಾರಿ ಹೇಗೆ ಪರಾರಿಯಾಗಿದ್ದಾನೆಂಬ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ಕನ್ಸಾನ್ ರೆಸ್ಟೊರೆಂಟ್‌ನಲ್ಲಿ 5 ಗುಂಡಿನ ಶಬ್ದಗಳು ಕೇಳಿಬಂತೆಂದು ಸಮೀಪದ ಹೊಟೆಲ್‌ನಲ್ಲಿದ್ದ ಜನರು ತಿಳಿಸಿದ್ದಾರೆ. ಕೊಪ್ಪು ತಂದೆ ರಾಮಮೋಹನ್ ಹೈದರಾಬಾದ್ ಡಿಜಿಪಿಯನ್ನು ಭೇಟಿ ಮಾಡಿ ಮೃತಪಟ್ಟ ಯುವಕ ತಮ್ಮ ಪುತ್ರನೇ, ಅಲ್ಲವೇ ಎಂದು  ಅಮೆರಿಕದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಪಡೆಯುವುದಕ್ಕೆ ಅವರ ನೆರವನ್ನು ಕೋರಿದ್ದಾರೆ.

ವಿಡಿಯೊ ಕ್ಲಿಕ್ ಮಾಡಿ
 

Recent Comments

Leave Comments

footer
Top