• 17 December 2018 02:16
Jai Kannada
Jai Kannada
Blog single photo
July 01, 2018

ಮೆಸ್ಸಿ, ರೊನಾಲ್ಡೊ ಕನಸು ನುಚ್ಚುನೂರು: ಫ್ರಾನ್ಸ್, ಉರುಗ್ವೆ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ 

ಕಜನ್: ಒಂದು ಕಡೆ ಕಿರಿಯ ವಯಸ್ಕ ಆಟಗಾರ ಕಿಲಿಯಾನ್ ಬಾಪೆ ನಾಲ್ಕು ನಿಮಿಷಗಳಲ್ಲಿ 2 ಗೋಲು ಗಳಿಸುವ ಮೂಲಕ ಫ್ರಾನ್ಸ್ ತಂಡವು ಅರ್ಜೆಂಟೀನಾ ತಂಡದ ವಿರುದ್ಧ 4-3ರಲ್ಲಿ ಗೆಲುವು ಗಳಿಸಿ, ವಿಶ್ವಕಪ್ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರೆ, ಇನ್ನೊಂದು ಕಡೆ ಉರುಗ್ವೇ ತಂಡದ ಪರ ಕವಾನಿ ಅವರ ಮಿಂಚಿನ ಎರಡು ಗೋಲುಗಳಿಂದ ಪೋರ್ಚು‌ಗಲ್ ತಂಡದ ರೊನಾಲ್ಡೊ ಕನಸು ನುಚ್ಚುನೂರಾಯಿತು. ಉರುಗ್ವೆ 2-1ರಿಂದ ಪೋರ್ಚುಗಲ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. 

ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ಪಂದ್ಯದಲ್ಲಿ ಸೂಪರ್ ಸ್ಟಾರ್ ಆಟಗಾರ ಮೆಸ್ಸಿ ತಮ್ಮ ಎಂದಿನ ಕಾಲ್ಚಳಕ ತೋರಿಸಲಿಲ್ಲ. ಮೆಸ್ಸಿ ಆಟ ಮುಗಿದಾಗ ತೀವ್ರ ನಿರಾಶೆಯಿಂದ ಕಣ್ಣೀರು ಹಾಕಿದರು. 

 19 ವರ್ಷ ವಯಸ್ಸಿನ ಮುನ್ಪಡೆ ಆಟಗಾರ ಬಾಪೆ  ಮಿಂಚಿನ ವೇಗದಲ್ಲಿ  ಹೊಡೆದ ಎರಡು ಗೋಲುಗಳಿಂದ ಮೊದಲಿಗೆ ಹಿನ್ನಡೆ ಸಾಧಿಸಿದ್ದ ಫ್ರಾನ್ಸ್ ಚೇತರಿಸಿಕೊಂಡಿತು. ಬಾಪೆ ಮೈದಾನದಲ್ಲಿ ಅತ್ಯಂತ ಪ್ರಭಾವಿ ಆಟಗಾರನಾದರೂ ಅರ್ಜೆಂಟೀನಾ ಏಂಜಲ್ ಡಿ ಮಾರಿಯಾ ಮತ್ತು ಫ್ರಾನ್ಸ್ ಫುಲ್ ಬ್ಯಾಕ್ ಬೆಂಜಮಿನ್ ಪಾವಾರ್ಡ್ ದೂರದ ಅಂತರದಿಂದ ಹೊಡೆದ ಎರಡು ಗೋಲುಗಳು ಅತ್ಯುತ್ತಮವಾಗಿತ್ತು.

ಗ್ರೀಜ್‌ಮ್ಯಾನ್ ಪೆನಾಲ್ಟಿ ಗೋಲಿನಿಂದ ಮುನ್ನಡೆ ಸಾಧಿಸಿದ್ದ ಫ್ರಾನ್ಸ್ ಜತೆ ಡಿ ಮಾರಿಯಾ ಹೊಡೆದ ಗೋಲಿನಿಂದ ಅರ್ಜೆಂಟೀನಾ  1-1ರಿಂದ ಸಮ ಮಾಡಿಕೊಂಡಿತು. ಮಧ್ಯಂತರ ಅವಧಿಯ ನಂತರ  ಗೇಬ್ರಿಯಲ್ ಮರ್ಕಾಡೊ ಹೊಡೆದ ಗೋಲಿನಿಂದ ಅರ್ಜೆಂಟೀನಾ 2-1ರಿಂದ ಮುನ್ನಡೆ ಸಾಧಿಸಿದಾಗ ಅರ್ಜೆಂಟೀನಾ ಬೆಂಬಲಿಗರು ಸಂಭ್ರಮದಲ್ಲಿ ಮುಳುಗಿದರು. 64 ಮತ್ತು 68ನೇ ನಿಮಿಷದಲ್ಲಿ ಬಾಪೆ ಮಿಂಚಿನ ಗೋಲುಗಳನ್ನು ಗಳಿಸಿ ಫ್ರಾನ್ಸ್‌ಗೆ ಅಮೋಘ ಮುನ್ನಡೆ ಗಳಿಸಿಕೊಟ್ಟರು.

 

Recent Comments

Leave Comments

footer
Top