• 17 December 2018 01:15
Jai Kannada
Jai Kannada
Blog single photo
December 14, 2017

ರವಿಬೆಳಗೆರೆಗೆ ಅನಾರೋಗ್ಯ: ಜಯದೇವ ಆಸ್ಪತ್ರೆಗೆ ದಾಖಲು 

ಅನಾರೋಗ್ಯದಿಂದ ಜಯದೇವ ಆಸ್ಪತ್ರೆಗೆ ಸೇರಿರುವ ರವಿ ಬೆಳಗರೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ.

ರವಿ ಬೆಳಗೆರೆ ಸಕ್ಕರೆ ಕಾಯಿಲೆ ಮತ್ತು ಶ್ವಾಸಕೋಶದ ತೊಂದರೆ,ಎದೆನೋವಿನಿಂದ ಬಳಲುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕೆಂದು ವೈದ್ಯರು ಸೂಚಿಸಿದ್ದಾರೆ.  ಅನಾರೋಗ್ಯದ ಕಾರಣದಿಂದಾಗಿಯೇ ರವಿ ಬೆಳಗೆರೆ ಅವರಿಗೆ ಮೂರು ದಿನಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಈ ಜಾಮೀನನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮತ್ತೆ ವಿಸ್ತರಿಸುವ ಸಾಧ್ಯತೆಯಿದೆ.


 ಏತನ್ಮಧ್ಯೆ ರವಿ ಬೆಳಗೆರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದರಿಂದ ತಮ್ಮ ಜೀವಕ್ಕೆ ಅಪಾಯ ಹೆಚ್ಚಾಗಿದೆ. ಆದ್ದರಿಂದ ತಮಗೆ ಇಬ್ಬರು ಪೊಲೀಸರ ರಕ್ಷಣೆಯ ಜತೆ ಗನ್‌ಮ್ಯಾನ್ ರಕ್ಷಣೆಯೂ ಬೇಕು ಎಂದು ಸುನಿಲ್ ಹೆಗ್ಗರವಳ್ಳಿ ಆಗ್ರಹಿಸಿದ್ದಾರೆ. 

Recent Comments

Leave Comments

footer
Top