• 18 November 2018 13:41
Jai Kannada
Jai Kannada
Blog single photo
December 12, 2017

2ನೇ ಏಕದಿನ: ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಹೋರಾಟ 

 ಮೊಹಾಲಿ: ಮೊಹಾಲಿಯಲ್ಲಿ ಇಂದು ನಡೆಯಲಿದೆ ಪ್ರತಿಷ್ಠೆಯ ಎರಡನೇ ಏಕದಿನ ಕ್ರಿಕೆಟ್ ಪಂದ್ಯ. ಲಂಕಾ ಮಣಿಸೋಕೆ ರೋಹಿತ್ ಪಡೆ ಮಾಸ್ಟರ್ ಪ್ಲಾನ್ ಹಾಕಿದ್ದು, ಗೆಲ್ಲುವುದಕ್ಕೆ ಕಠಿಣ ಅಭ್ಯಾಸದಲ್ಲಿ ಟೀಂ ಇಂಡಿಯಾ ತೊಡಗಿದೆ.

ಶ್ರೀಲಂಕಾ ವಿರುದ್ಧ ಎರಡನೇ ಪಂದ್ಯ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಶೂನ್ಯಕ್ಕೆ ಔಟಾಗಿ ಶಾಕ್ ನೀಡಿದ್ದರು. ಆ ಶಾಕ್‌ನಿಂದ ಚೇತರಿಸಿಕೊಳ್ಳದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸೋಲಪ್ಪಿತು.

ಎರಡನೇ ಪಂದ್ಯದಲ್ಲಿ ರಹಾನೆಗೆ ಅವಕಾಶ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಶ್ರೇಯಸ್ ಮತ್ತು ಹಾರ್ದಿಕ್ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಲಾಗಿದೆ. ರೋಹಿತ್ ಪಡೆ ತಿರುಗೇಟು ಕೊಡುವ ತವಕದಲ್ಲಿದ್ದು, ಈ ಪಂದ್ಯ ಗೆಲ್ಲುವ ಮೂಲಕ ಈ 1-1ರಿಂದ ಸಮ ಮಾಡಿಕೊಳ್ಳುವ ಸಂಕಲ್ಪ ಹೊಂದಿದೆ. ಲಂಕಾ ಕೂಡ ಈ ಪಂದ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಟೆಸ್ಟ್ ಸರಣಿಯಲ್ಲಿ ಸೋತಿದ್ದ ಶ್ರೀಲಂಕಾಗೆ ಏಕ ದಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

Recent Comments

Leave Comments

footer
Top