• 18 November 2018 13:29
Jai Kannada
Jai Kannada
Blog single photo
December 08, 2017

ಸುನಿಲ್ ಹತ್ಯೆಗೆ ಸುಪಾರಿ: ತಪ್ಪೊಪ್ಪಿಕೊಂಡ ರವಿ ಬೆಳಗೆರೆ

ಬೆಂಗಳೂರು:  ರವಿ ಬೆಳೆಗೆರೆ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆ ತಪ್ಪೊಪ್ಪಿಕೊಂಡಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಸುನಿಲ್ ನನ್ನ ವೈಯಕ್ತಿಕ ಬದುಕಿನಲ್ಲಿ ಎಂಟ್ರಿ ಕೊಟ್ಟಿದ್ದರಿಂದ ಹತ್ಯೆ ಮಾಡಿದ್ದಾಗಿ ರವಿ ಬೆಳಗರೆ ಹೇಳಿದ್ದಾರೆಂದು ವರದಿಯಾಗಿದ್ದು, ಪೊಲೀಸರು ಇವೆಲ್ಲವನ್ನೂ ಚಿತ್ರೀಕರಿಸಿಕೊಂಡಿದ್ದಾರೆ.

ಮನೆ, ಕಾರು, ಕಚೇರಿಯಲ್ಲಿ ತಪಾಸಣೆ ನಡೆಸಿದಾಗ ಕಚೇರಿಯಲ್ಲಿ ಪಿಸ್ತೂಲೊಂದು ಪತ್ತೆಯಾಗಿದೆ. ಹಾಯ್ ಬೆಂಗಳೂರು, ಓ ಮನಸೇ ಮುಂತಾದ ಅನೇಕ ಪತ್ರಿಕೆಗಳು, ಪ್ರಾರ್ಥನಾ ಶಾಲಾ ಮಂದಿರ ನಡೆಸುತ್ತಿದ್ದ ರವಿ ಬೆಳೆಗರೆ ಪೆನ್ ಹಿಡಿದ ಕೈಯಲ್ಲಿ ಗನ್ ಹಿಡಿಯಲು ಸುಪಾರಿ ಕೊಟ್ಟರು ಎಂಬ ಕ್ರೂರ ಸತ್ಯವನ್ನು ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಸ್ಫೋಟಕ ಸುದ್ದಿಯನ್ನು ಬಹಿರಂಗ ಮಾಡಿದ್ದಾನೆ.

ಕೆಲವೇ ಕ್ಷಣಗಳಲ್ಲಿ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ರವಿ ಬೆಳೆಗೆರೆ ಈ ರೀತಿ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಅವರ ಸಂಬಂಧ ಸುಮಾರು 17 ವರ್ಷಗಳ ಗಾಢವಾದ ಸಂಬಂಧ ಎಂದು ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ.
ಸುಪಾರಿ ಹಂತಕನ ಬಳಿ ಸಿಕ್ಕಿರುವ ಪಿಸ್ತೂಲನ್ನು ಪೊಲೀಸರು ಫೊರೆನ್ಸಿಕ್ ಲ್ಯಾಬ್‌ಗೆ ಕಳಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಗೂ ಮತ್ತು ಈ ಪಿಸ್ತೂಲಿಗೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ.

ಸುನಿಲ್ ಹೆಗ್ಗರವಳ್ಳಿ ಹತ್ಯೆಯಿಂದ ಬಚಾವಾಗಿದ್ದು ಹೇಗೆ ಎಂಬ ವಿಷಯ ಕುತೂಹಲಕಾರಿಯಾಗಿದೆ. ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಹೊರಟಿದ್ದಾಗ ಸುನಿಲ್ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನ್ನು ಕಂಡು ಹತ್ಯೆಗೆ ಯತ್ನಿಸದೇ ವಾಪಸ್ ಹೋಗಿದ್ದನೆಂದು ತಿಳಿದುಬಂದಿದೆ.

ಹೆಜ್ಜೆ ಇಡುವಾಗ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.ಗಂಡ ಯುದ್ಧಭೂಮಿಗೆ ತೆರಳಿದ್ದಾಗ ಶತ್ರುವಿನ ತೊಡೆಯ ಮೇಲೆ ಕುಳಿತುಕೊಳ್ಳುವುದು ಪಾವಿತ್ರ್ಯತೆಯೇ ಎಂದು ರವಿಬೆಳೆಗರೆ ಫೇಸ್‌ಬುಕ್‌ನಲ್ಲಿ ಎರಡನೇ ಪತ್ನಿ ಯಶೋಮತಿಯ ಫೋಟೊದೊಂದಿಗೆ ಸ್ಟೇಟಸ್ ಹಾಕಿದ್ದರೆಂದು ತಿಳಿದುಬಂದಿದೆ. ಹಾಗಿದ್ದ ಮೇಲೆ ಶೂಟ್ ಔಟ್ ತಪ್ಪಿಸಿದ್ದು ಯಶೋಮತಿಯೇ ಎಂಬ ಅನುಮಾನ ಸಹಜವಾಗಿ ಮೂಡಿದೆ.
ಜಾಮೀನು ಸಿಗುವುದು ಕಷ್ಟ
ಸುಪಾರಿ ನೀಡುವುದು ಬಹಳ ಸೀರಿಯಸ್ ಅಫೆನ್ಸ್. ಅವರಿಗೆ ಜಾಮೀನು ಸಿಗುವುದು ತುಂಬಾ ಕಷ್ಟ ಎಂದು ಹಿರಿಯ ವಕೀಲ ಶಂಕರಪ್ಪ ಎಂಬುವರು ಹೇಳಿದ್ದಾರೆ. 

Recent Comments

Leave Comments

footer
Top