• 15 December 2017 23:33
Jai Kannada
Jai Kannada
Blog single photo
December 07, 2017

ಲವ್ ಜಿಹಾದ್‌ಗೆ ಪ್ರತೀಕಾರ: ಅರೆಬೆಂದ ಶವ ಪತ್ತೆ 

 ಉದಯಪುರ: ಲವ್ ಜಿಹಾದ್‌ಗೆ ಸಂಬಂಧಿಸಿದಂತೆ ಕಾರ್ಮಿಕನೊಬ್ಬನನ್ನು ನಿರ್ದಯವಾಗಿ ಕೊಂದು ಅವನ ದೇಹವನ್ನು ಸುಟ್ಟು ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈ ಘಟನೆ ಬೆಳಕಿಗೆ ಬರುವ ತನಕ ಆರೋಪಿ ತಲೆತಪ್ಪಿಸಿಕೊಂಡಿದ್ದ. ಕಾರ್ಮಿಕನ ಅರೆ ಬೆಂದ ಶವವು ಬುಧವಾರ ರಾಜಸಾಮಂಡ್‌ನ 100 ಅಡಿ ರಸ್ತೆಯಲ್ಲಿ ಪತ್ತೆಯಾಗಿದೆ.
ಉರಿಯುತ್ತಿದ್ದ ದೇಹದ ಪಕ್ಕ ನಿಂತಿದ್ದ ವ್ಯಕ್ತಿಯೊಬ್ಬ ಲವ್ ಜಿಹಾದ್ ಕುರಿತು ಬೆದರಿಕೆ ಹಾಕುತ್ತಿದ್ದ ವಿಡಿಯೊ ಕ್ಲಿಪ್ ವೈರಲ್ ಆದ ಬಳಿಕ ಇದು ಗಮನ ಸೆಳೆದಿತ್ತು.

ತಡರಾತ್ರಿಯಲ್ಲಿ ಪೊಲೀಸರು ವಿಡಿಯೊದಲ್ಲಿ ಉರಿಯುತ್ತಿದ್ದುದು ಇದೇ ದೇಹ ಎಂದು ನಂತರ ದೃಢಪಡಿಸಿದ್ದಾರೆ. ಹಂತಕನನ್ನು ಶಂಭು ಲಾಲ್ ಎಂದು ಗುರುತಿಸಲಾಗಿದೆ. 

ಅವನು ವ್ಯಕ್ತಿಯನ್ನು ಹೇಗೆ ಕೊಂದ ಮತ್ತು  ಆ ದೃಶ್ಯವನ್ನು ಹೇಗೆ ವಿಡಿಯೊ ಮಾಡಿದ ಎನ್ನುವುದೇ ಆಘಾತಕಾರಿಯಾಗಿದೆ. ಆರೋಪಿಯನ್ನು ಬಂಧಿಸಿ ವಿಶೇಷ ತನಿಖಾ ದಳವನ್ನು ತನಿಖೆಗೆ ನೇಮಿಸಲಾಗಿದೆ. 

 ವಿಡಿಯೊದಲ್ಲಿ ವ್ಯಕ್ತಿ ಕಾರ್ಮಿಕನನ್ನು ಕೊಡಲಿಯಿಂದ ಹೊಡೆದು ಕೊಂದು ಬಳಿಕ ದೇಹಕ್ಕೆ ಬೆಂಕಿ ಹಚ್ಚಿ ಬೆದರಿಕೆ ಹಾಕುತ್ತಾ, ಲವ್ ಜಿಹಾದ್ ಕೊನೆಗೊಳ್ಳದಿದ್ದರೆ ಪ್ರತಿಯೊಬ್ಬ ಭಾರತೀಯ ಇಂತಹ ಭಯಾನಕ ಕೃತ್ಯವೆಸಗುತ್ತಾನೆ ಎಂದು ಹೇಳಿದ್ದ. ಮೋಟರ್ ಸೈಕಲ್ ಮತ್ತು ಸ್ಕೂಟಿ ಕೂಡ ವಿಡಿಯೊದಲ್ಲಿ ಪತ್ತೆಯಾಗಿದೆ. ವಿಡಿಯೊ ಚಿತ್ರೀಕರಿಸಿರುವ ವಿಧಾನ ಗಮನಿಸಿದಾಗ ಮೂರನೇ ವ್ಯಕ್ತಿ ಇರುವುದು ದೃಢಪಟ್ಟಿದೆ.

 

Recent Comments

Leave Comments

footer
Top