• 15 December 2017 23:30
Jai Kannada
Jai Kannada
Blog single photo
December 06, 2017

ನಾನು ಮಾನವ, ತಪ್ಪು ಮಾಡುವುದು ಸಹಜ: ರಾಹುಲ್ ಗಾಂಧಿ 

ನವದೆಹಲಿ: ಅವಶ್ಯಕ ವಸ್ತುಗಳ ದರ ಏರಿಕೆಯ ಬಗ್ಗೆ ಗಮನಸೆಳೆದು ತಪ್ಪಾಗಿ ಅಂಕಿ ಅಂಶ ನೀಡಿದ ತಮ್ಮ ಟ್ವೀಟ್ ಬಗ್ಗೆ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಿದರು.

ಆದರೆ ಆ ಕ್ಷಮಾಪಣೆಯಲ್ಲೂ ತಮ್ಮ ಕಟ್ಟಾ ವಿರೋಧಿ ನರೇಂದ್ರ ಮೋದಿಗೆ ಭಿನ್ನವಾಗಿ ತಾವು ಮಾನವರಾಗಿದ್ದು, ತಪ್ಪುಗಳನ್ನು ಮಾಡುವುದು ಸಹಜ ಎಂದು ಹೇಳುವ ಮೂಲಕ ತಾವು ಮಾಡಿದ ತಪ್ಪಿಗೆ ಮೋದಿಯನ್ನು ಕೂಡ ಛೇಡಿಸದೇ ಬಿಡಲಿಲ್ಲ.


ಮಂಗಳವಾರ ರಾಹುಲ್ ಟ್ವಿಟರ್ ಅಕೌಂಟ್‌ನಲ್ಲಿ ಬಿಜೆಪಿಗೆ ಒಂದು ಪ್ರಶ್ನೆಯ ಬಾಣ ಎಸೆದು ಅಗತ್ಯ ವಸ್ತುಗಳ ದರ ಏರಿಕೆ ಬಗ್ಗೆ ಗಮನ ಸೆಳೆದಿದ್ದರು. ಗ್ಯಾಸ್ ಸಿಲಿಂಡರ್, ಬೆೇಳೆ, ಈರುಳ್ಳಿ, ಹಾಲು ಮತ್ತು ಡೀಸೆಲ್ ದರದ ಶೇಕಡಾವಾರು ಏರಿಕೆ ಕುರಿತು ಅಂಕಿಅಂಶಗಳ ಟೇಬಲ್ ಟ್ವೀಟ್ ಮಾಡಿದ್ದರು.

ಕೋಷ್ಠಕದಲ್ಲಿ ಬೇಳೆಯ ದರಗಳು ಕಿಲೊಗೆ 45 ರೂ.ಗಳಿಂದ 80ರೂಗೆ ಏರಿಕೆಯಾಗಿತ್ತು. ಅಂದರೆ ಶೇ. 77 ಶೇಕಡಾವಾರು ಏರಿಕೆಯಾಗಿತ್ತು.

ಆದರೆ ರಾಹುಲ್ ಟ್ವೀಟ್ ಮಾಡಿದ ಕೋಷ್ಠಕದಲ್ಲಿ 177 ಶೇಕಡ ಏರಿಕೆಯಾಗಿದೆ. ಈ ಟ್ವೀಟ್ ಬಳಿಕ ಡಿಲೀಟ್ ಮಾಡಿ ಸರಿಯಾದ ಅಂಕಿಅಂಶದೊಂದಿಗೆ ರಾಹುಲ್ ಬದಲಿಸಿದರು.

Recent Comments

Leave Comments

footer
Top