• 15 December 2017 23:31
Jai Kannada
Jai Kannada
Blog single photo
December 06, 2017

ಶ್ರೀರಾಮ ಹುಟ್ಟಿದ್ದಕ್ಕೆ ದಾಖಲೆ ಇಲ್ಲ: ದ್ವಾರಕಾನಾಥ್ ಹೇಳಿಕೆಗೆ ಖಂಡನೆ 

ಬೆಂಗಳೂರು: ಶ್ರೀರಾಮ ಹುಟ್ಟಿದ್ದಕ್ಕೆ ದಾಖಲೆ ಇಲ್ಲ ಎಂದು ಸಿ.ಎಸ್. ದ್ವಾರಕಾನಾಥ್ ಹೇಳಿಕೆ ಕುರಿತು  ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಸಂಘಟನೆ ಮುಖಂಡ ಗಣೇಶ್ ಶೆಟ್ಟಿ ಈ ದೂರು ದಾಖಲಿಸಿದ್ದಾರೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಏಸುಕ್ತಿಸ್ತ, ಪೈಗಂಬರ್ ಮತ್ತು ಬುದ್ಧ ಹುಟ್ಟಿದ್ದಕ್ಕೆ ದಾಖಲೆಗಳಿವೆ. ಆದರೆ ಶ್ರೀರಾಮ ಹುಟ್ಟಿದ್ದಕ್ಕೆ  ದಾಖಲೆಗಳಿಲ್ಲ ಎಂದು ದ್ವಾರಕಾನಾಥ್ ಹೇಳಿಕೆ ನೀಡಿದ್ದರು.

ದ್ವಾಕರಾನಾಥ್ ಅವರು ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆಂದು ಗಣೇಶ್ ಶೆಟ್ಟಿ ದೂರಿದರು. ಈ ಕುರಿತು ಗಣೇಶ್ ಶೆಟ್ಟಿ ಮಾತನಾಡುತ್ತಾ ಒಂದು ಧರ್ಮವನ್ನು ದ್ವಾರಕಾನಾಥ್ ಟಾರ್ಗೆಟ್ ಮಾಡಿದ್ದಾರೆ. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ,.

ಈ ಕುರಿತು ಸ್ಪಷ್ಟೀಕರಣ ನೀಡಿರುವ ದ್ವಾರಕಾನಾಥ್  ಸುಪ್ರೀಕೋರ್ಟ್‌ನ ಕೆಲವು ಅಭಿಪ್ರಾಯಗಳ ಬಗ್ಗೆ ತಾವು ಮಾತನಾಡಿದ್ದಾಗಿ ಹೇಳಿದ್ದಾರೆ.
................

Recent Comments

Leave Comments

footer
Top