• 15 December 2017 23:34
Jai Kannada
Jai Kannada
Blog single photo
December 06, 2017

ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಹುಲ್ ರಾಜ್ಯಕ್ಕೆ ಭೇಟಿ 

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯಕ್ಕೆ ರಾಹುಲ್ ಗಾಂಧಿ ಮೊದಲಬಾರಿಗೆ ಭೇಟಿ ನೀಡಲಿದ್ದಾರೆ. ರಾಜ್ಯ ವಿಧಾನಸಭೆ ಗೆಲುವಿಗೆ ಮೊದಲ ಆದ್ಯತೆ ನೀಡಲಿದ್ದು, ಕಾರ್ಯರ್ತರನ್ನು ಹುರಿದುಂಬಿಸಲಿದ್ದಾರೆ. ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಹಲವು ರಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಶತಾಯ-ಗತಾಯ ಗೆಲುವಿಗಾಗಿ ರಾಹುಲ್ ಗಾಂಧಿ ಯತ್ನಿಸಲಿದ್ದು, ಹಲವು ಬಹಿರಂಗ ಸಭೆಗಳ ಆಯೋಜನೆಗೆ ನಿರ್ಧರಿಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಗೆಲುವಿಗೆ ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನಿಸುತ್ತಿರುವ ನಡುವೆ ರಾಜ್ಯ ಚುನಾವಣೆಯನ್ನೂ ಗೆದ್ದು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಶಕ್ತಿ ಮೀರಿ ಶ್ರಮಿಸುವುದರಲ್ಲಿ ಅನುಮಾನವಿಲ್ಲ.

ಗುಜರಾತ್‌ನಲ್ಲಿ ಪ್ರಯೋಗಿಸಿದ ಚುನಾವಣೆ ಪ್ರಚಾರದ ತಂತ್ರವನ್ನು ಕಾಂಗ್ರೆಸ್ ಇಲ್ಲಿಯೂ ಪ್ರಯೋಗಿಸುತ್ತದೆಯೇ ಎಂದು ಕಾದುನೋಡಬೇಕಾಗಿದೆ.

Recent Comments

Leave Comments

footer
Top