• 19 February 2018 21:30
Jai Kannada
Jai Kannada
Blog single photo
December 05, 2017

ಮಂಜುಗಟ್ಟಿದ ನೀರಿನಲ್ಲಿ ಸಿಕ್ಕಿಬಿದ್ದ ನಾಯಿಯ ರಕ್ಷಣೆ 

ಒಟ್ಟಾವಾ: ಕೆನಡಾದಲ್ಲಿ ಮಂಜುಗಟ್ಟಿದ ನೀರಿನ ಮೇಲೆ ಓಡಿದ ನಾಯಿಯೊಂದು ಸಂಕಷ್ಟಕ್ಕೆ ಸಿಲುಕಿ ಅದನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ನಾಯಿಯ ಮಾಲೀಕ ನಾಯಿಯ ಚೈನ್ ಕೈಬಿಟ್ಟಿದ್ದರಿಂದ ಮಂಜುಗಟ್ಟಿದ ನೀರಿನ ಮೇಲೆ ಓಡಿದ ನಾಯಿ ಮಂಜಿನ ಪದರ ಒಡೆದ ಕೂಡಲೇ ಕೊರೆಯುವ ನೀರಿನಲ್ಲಿ ಸಿಕ್ಕಿಬಿದ್ದಿತ್ತು.  ಮಾಲೀಕ ಅಗ್ನಿಶಾಮಕಕ್ಕೆ ಕರೆ ಮಾಡಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ನಾಯಿಯನ್ನು ರಕ್ಷಿಸಿದರು.

ಅಗ್ನಿಶಾಮಕ ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ತೆವಳುತ್ತಾ ಮಂಜುಗಟ್ಟಿದ ನೀರಿನ ಮೇಲೆ ಹೋಗಿ ನಾಯಿಯನ್ನು ಹಿಡಿದುಕೊಂಡರು. ನಂತರ ದಡದಲ್ಲಿದ್ದ ಸಿಬ್ಬಂದಿ ನಿಧಾನವಾಗಿ ಹಗ್ಗ ಎಳೆದು ನಾಯಿಯ ಸಮೇತ ಸಿಬ್ಬಂದಿಯನ್ನು ದಡಕ್ಕೆ ತಂದರು.

ವಿಡಿಯೊ ಕ್ಲಿಕ್ ಮಾಡಿ 

Recent Comments

Leave Comments

footer
Top