• 15 December 2017 23:25
Jai Kannada
Jai Kannada
Blog single photo
December 05, 2017

 ಅಕ್ರಮ ಸಂಬಂಧ: ಪತಿಯ ಗುಪ್ತಾಂಗಕ್ಕೆ ಕುದಿಯುವ ಎಣ್ಣೆ ಸುರಿದ ಪತ್ನಿ 

ಮಧುರೈ: ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ಇನ್ನೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಪುರುಷನ ಗುಪ್ತಾಂಗಕ್ಕೆ ಪತ್ನಿ ಕೊತ ಕೊತ ಕುದಿಯುವ ಎಣ್ಣೆ ಸುರಿದ ಘಟನೆ ವರದಿಯಾಗಿದೆ. ನೆಹರೂ ನಗರದ ನಿವಾಸಿ ಪರಮೇಶ್ವರನ್‌ಗೆ ಶಶಿಕಲಾ ಎಂಬಾಕೆಯೊಂದಿಗೆ ಮದುವೆಯಾಗಿತ್ತು.

ಆದರೆ ಪರಮೇಶ್ವನ್ ಇನ್ನೊಬ್ಬ ಮಹಿಳೆಯ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದರಿಂದ ಪತ್ನಿ ಕೆರಳಿ ಕೆಂಡವಾಗಿದ್ದಳು. ಪತ್ನಿಯ ಗಲಾಟೆಯಿಂದ ಬೇಸತ್ತ ಪತಿ ಮನೆಗೆ ಬರುವುದನ್ನು ಬಿಟ್ಟುಬಿಟ್ಟಿದ್ದ. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿತ್ತು.

ಪೊಲೀಸರು ಪರಮೇಶ್ವರನ್‌ಗೆ ಎಚ್ಚರಿಕೆ ನೀಡಿ ಕಳಿಸಿದ ಬಳಿಕ ಪತ್ನಿಯೊಂದಿಗೆ ವಾಸಿಸಲಾರಂಭಿಸಿದ. ಕೆಲವು ದಿನಗಳ ಬಳಿಕ ತನ್ನ ಚಾಳಿ ಮುಂದುವರಿಸಿದ ಪತಿ ಮತ್ತೆ ಪ್ರೇಯಸಿಯ ಜತೆ ವಾಸಿಸಲಾರಂಭಿಸಿ ಮನೆಗೆ ಬರುವುದನ್ನು ನಿಲ್ಲಿಸಿದ. ಕಳೆದ ವಾರ ಪತ್ನಿ ಶಶಿಕಲಾ ಅವನ ಜತೆ ನಯವಾಗಿ ಮಾತನಾಡಿ ಉಪಾಯವಾಗಿ ಮನೆಗೆ ಕರೆಸಿಕೊಂಡಿದ್ದಾಳೆ

. ಪತಿ ರಾತ್ರಿ ನಿದ್ರೆಗೆ ಜಾರಿದ್ದಾನೆಂದು ಖಚಿತಪಡಿಸಿಕೊಂಡು ಕೊತ, ಕೊತ ಸುರಿಯುವ ಎಣ್ಣೆಯನ್ನು ಗುಪ್ತಾಂಗದ ಮೇಲೆ ಸುರಿದಳು. ಪತಿ ಜೋರಾಗಿ ಕಿರುಚಿಕೊಂಡ ಬಳಿಕ ಅಕ್ಕಪಕ್ಕದ ಜನರು ಆಸ್ಪತ್ರೆಗೆ ಸೇರಿಸಿದರು.

Recent Comments

Leave Comments

footer
Top