• 19 November 2018 07:18
Jai Kannada
Jai Kannada
Blog single photo
April 07, 2018

ಎಂಜಿನ್ ವೈಫಲ್ಯದಿಂದ ವಿಮಾನ ತುರ್ತುಭೂಸ್ಪರ್ಶ 

ದೆಹಲಿ:  ಐಜಿಐ ಏರ್‌ಪೋರ್ಟ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸಂಭವಿಸಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟರ್ಮಿನಲ್ 3ರಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. 8 ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ರನ್ನವೇಗೆ ಧಾವಿಸಿದವು.

ಸುಮಾರು 250 ಜನರನ್ನು ಸಾಗಿಸುತ್ತಿದ್ದ ಫ್ಲೈಟ್‌ನಲ್ಲಿ ಸಂಜೆ 4.30ಕ್ಕೆ ಎಂಜಿನ್ ವೈಫಲ್ಯ ಉಂಟಾಯಿತು. ದೆಹಲಿ ಎಟಿಸಿಯನ್ನು ತಕ್ಷಣವೇ ವಿಮಾನದ ಪೈಲಟ್ ಸಂಪರ್ಕಿಸಿದರು. ಬಳಿಕ ಟರ್ಮಿನಲ್ 3ರಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡುವುದಕ್ಕೆ  ಅವಕಾಶ ಕಲ್ಪಿಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಕ್ಕಿಳಿದರು.
 

Recent Comments

Leave Comments

footer
Top