• 19 October 2018 12:22
Jai Kannada
Jai Kannada
Blog single photo
November 30, -0001

ಸಿಎಂ ಮೆಚ್ಯುರಿಟಿ ಪಾಠಕ್ಕೆ ಪ್ರತಾಪ್ ಸಿಂಹ ಪ್ರತಿಕ್ರಿಯೆ 

ಬೆಂಗಳೂರು:  ಸಿದ್ದರಾಮಯ್ಯ ಯಾವಾಗಲೂ ಮೆಚ್ಯುರಿಟಿ ಪಾಠ ಹೇಳುತ್ತಾರೆ. ನೀವು ರಾಜ್ಯದ ಮುಖ್ಯಮಂತ್ರಿಗಳು.ಕೇಂದ್ರ ಸರ್ಕಾರದ ಯೋಜನೆಗಳನ್ನು ನೀವು ಉದ್ಘಾಟನೆ ಮಾಡುವುದು ಮೆಚ್ಯುರಿಟಿನಾ ಎಂದು ಪ್ರಶ್ನಿಸಿದರು.

ಕೇಂದ್ರದ ಯೋಜನೆಗಳನ್ನು ಹೈಜಾಕ್ ಮಾಡುವುದು ನಿಮ್ಮ ಮೆಚ್ಯುರಿಟಿನಾ? ಯಾವುದೇ ಸಾರ್ವಜನಿಕ ಹುದ್ದೆ ಹೊಂದಿಲ್ಲದಿದ್ದರೂ ಅಧಿಕಾರಿಗಳಿಗೆ ಸಲಹೆ ನೀಡುವ ನಿಮ್ಮ ಪುತ್ರನದ್ದು ಮೆಚ್ಯುರಿಟಿನಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ಪ್ರತಾಪ್ ಸಿಂಹ ಮೋಸ್ಟ್ ಅನ್‌ಮೆಚ್ಯುರಡ್ ಪೊಲಿಟಿಷಿಯನ್. ಬಾಯಿಗೆ ಬಂದ ಹಾಗೆ ಹೇಳುವುದು ಅವರ ಜಾಯಮಾನ ಎಂದು ಸಿಎಂ ಹೇಳಿದ್ದರು. ಬಿಜೆಪಿ ವಿರುದ್ಧ ಕೂಡ ಹರಿಹಾಯ್ದು, ಬಿಜೆಪಿ ಎಂದರೆ ಸದಾ ಕತ್ತರಿ ಇಟ್ಟುಕೊಂಡಿರುತ್ತಾರೆ.  ಸೂಜಿ ಇಟ್ಟುಕೊಂಡು ಅದನ್ನು ಹೊಲಿಯುವುದು ನಮ್ಮ ಕೆಲಸ ಎಂದು ಪ್ರತಿಕ್ರಿಯಿಸಿದ್ದರು.

Recent Comments

Leave Comments

footer
Top