• 15 December 2017 23:34
Jai Kannada
Jai Kannada
Blog single photo
December 04, 2017

ಕಾನೂನು ಉಲ್ಲಂಘಿಸಿದರೆ ಅರೆಸ್ಟ್ ಮಾಡಬಾರದಾ: ಸಿಎಂ ಪ್ರಶ್ನೆ 

ಬೆಂಗಳೂರು: ಹನುಮಜಯಂತಿ ಮಾಡಬೇಡಿ ಎಂದು ನಾವು ಹೇಳಿಲ್ಲ. ಕಾನೂನು ಉಲ್ಲಂಘನೆ ಮಾಡಿದವರನ್ನು ಅರೆಸ್ಟ್ ಮಾಡಬಾರದಾ? ಎಂದು ಸಿಎಂ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. 

 ಈ ಪ್ರತಾಪ್ ಸಿಂಹ ಅವರು ಹೇಳಿದ ರೂಟ್‌ನಲ್ಲೇ  ಮೆರವಣಿಗೆಗೆ ಅನುಮತಿ ನೀಡಬೇಕೆಂದು ಕೇಳುವುದು ಯಾವ ನ್ಯಾಯ? ನಾಳೆ ಯಾವುದಾದರೂ ಕೋಮು ಗಲಭೆಯಾದರೆ ಯಾರು ಜವಾಬ್ದಾರರು?

ಸರ್ಕಾರಿ ಕಾರಿನಲ್ಲಿ ತಾವೇ ಡ್ರೈವಿಂಗ್ ಮಾಡಿ ಬ್ಯಾರಿಕೇಡ್ ಮೇಲೆ ಬಿಟ್ಟು, ಪೊಲೀಸರ ಮೇಲೆ  ಹತ್ತಿಸಿದರೆ ಬಂಧಿಸದೇ ಬಿಡಲಾಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅದು ಒಬ್ಬ ಎಂಪಿ ಮಾಡುವ ಕೆಲಸವೇ? ಅರೆಸ್ಟ್ ಮಾಡಿ ಜೈಲಿಗೆ ಕಳಿಸಬಹುದಾಗಿತ್ತು. ಆದರೆ ಅವರು ಎಂಪಿ ಆಗಿರುವುದರಿಂದ ಬೇಡವೆಂದು ನಾನೇ ಹೇಳಿದ್ದೆ. ಈಗ ಅವರ ಮೇಲೆ ಕೇಸ್ ರಿಜಿಸ್ಟರ್ ಆಗಿದೆ. ಸರ್ಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿ ಮಾಡಿದ ಕಾರಣವನ್ನು ನೀಡಲಾಗಿದೆ. ಎಂದು ಸಿಎಂ ಹೇಳಿದರು.

ಅಮಿತ್ ಷಾ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಅದೂ ಒಂದು ಕಾರಣವಿರಬಹುದು. ನೀನು ಎಷ್ಟು ಲಾಠಿ ಚಾರ್ಜ್ ಮಾಡಿಸಿದ್ದೀಯಾ, ಎಷ್ಟು ಟಿಯರ್ ಗ್ಯಾಸ್ ಮಾಡಿಸಿದ್ದೀಯಾ ಎಂದು ಅಮಿತ್ ಶಾ ಬೈದಿರಬಹುದು. ಅದಕ್ಕಾಗಿ ಅವರು ಈ ಕೆಲಸ ಮಾಡಿರಬಹುದು ಎಂದು ಮಾರ್ಮಿಕವಾಗಿ ಹೇಳಿದರು. 

Recent Comments

Leave Comments

footer
Top