• 19 November 2018 06:42
Jai Kannada
Jai Kannada
Blog single photo
April 07, 2018

ಇಂದ್ರಾಣಿ ಮುಖರ್ಜಿ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲು 

ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಐಎನ್‌ಎಸ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ಅವರನ್ನು ತೀವ್ರ ಅಸ್ವಸ್ಥತೆಯಿಂದ ಬೈಕುಲ್ಲಾದ ಜೆಜೆ ಆಸ್ಪತ್ರೆಗೆ ಸೇರಿಸಲಾಗಿದೆ. ತನ್ನ ಮೊದಲ ಪತಿಯ ಪುತ್ರಿಯಾದ ಶೀನಾ ಬೋರಾಳನ್ನು ತಾಯಿ ಇಂದ್ರಾಣಿ ಮಾದಕ ವಸ್ತುಗಳನ್ನು ಬೆರೆಸಿದ ನೀರು ಕುಡಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಳು.

ಕಾರಿನಲ್ಲಿ ಪಾಲಿ ಹಿಲ್‌ ಕಡೆ ಕರೆದುಕೊಂಡು ಹೋಗಿ ಅರೆಪ್ರಜ್ಞಾ ವಸ್ಥೆಯಲ್ಲಿ ಇದ್ದ ಶೀನಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಳು. ಶೀನಾ ಅವರನ್ನು ಹತ್ಯೆಮಾಡಿ ರಾಯಗಡ ಅರಣ್ಯದಲ್ಲಿ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು.

ಶೀನಾ ಸೋದರ ಮಿಖಾಯಿಲ್ ಬೋರಾನನ್ನು ಕೂಡ ಇಂದ್ರಾಣಿ ಮತ್ತು ಪತಿ ಸಂಜೀವ್ ಖಾನ್ ಹತ್ಯೆ ಪ್ರಯತ್ನ ಮಾಡಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ.

Recent Comments

Leave Comments

footer
Top