• 15 December 2017 23:33
Jai Kannada
Jai Kannada
Blog single photo
December 04, 2017

ಮಕ್ಕಳ ಮೇಲೆ ರೇಪ್ ವಿರುದ್ಧ ಮರಣದಂಡನೆಗೆ ಮ.ಪ್ರ. ಸರ್ಕಾರ ಅಸ್ತು 

ನವದೆಹಲಿ: 12 ವರ್ಷ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದರೆ ಮರಣದಂಡನೆ ಶಿಕ್ಷೆ ನೀಡುವ ವಿಧೇಯಕವನ್ನು ಮಧ್ಯಪ್ರದೇಶ ಸರ್ಕಾರ ಸೋಮವಾರ ಅಂಗೀಕರಿಸಿದೆ.
ದೇಶದಲ್ಲಿ ರೇಪ್ ಘಟನೆಗಳು ಅಧಿಕ ಪ್ರಮಾಣದಲ್ಲಿರುವ ಸಂದರ್ಭದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಇದನ್ನು ಆಧರಿಸಿ, ಎಂಪಿ ಸರ್ಕಾರ 12 ವರ್ಷ ವಯಸ್ಸಿನೊಳಗಿನ ಹೆಣ್ಣುಮಕ್ಕಳ ಮೇಲೆ ರೇಪ್ ಅಥವಾ ಗ್ಯಾಂಗ್ ರೇಪ್ ಎಸಗಿದರೆ ಆರೋಪಿಯನ್ನು ಮರಣದಂಡನೆಗೆ ಗುರಿಮಾಡುವ ವಿಧೇಯಕಕ್ಕೆ ಅನುಮೋದನೆ ನೀಡಿದೆ.
12 ವರ್ಷದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವವರು ಮಾನವ ಜೀವಿಗಳಲ್ಲ, ಅವರು ರಾಕ್ಷಸರಾಗಿದ್ದರಿಂದ ಅವರಿಗೆ ಜೀವಿಸುವ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಚೌಹಾಣ್ ಹೇಳಿದರು.
ಭೂಪಾಲ್ ಗ್ಯಾಂಗ್ ರೇಪ್ ಘಟನೆಯ ನಂತರ ಮುಖ್ಯಮಂತ್ರಿ ಚೌಹಾಣ್ ತೀವ್ರ ಟೀಕೆಗೆ ಗುರಿಯಾಗಿದ್ದರು. 19 ವರ್ಷ ವಯಸ್ಸಿನ ಬಾಲಕಿ ಮೇಲೆ ನಾಲ್ವರು ದುಷ್ಕರ್ಮಿಗಳು  3ಗಂಟೆಗಳ ಕಾಲ ಅತ್ಯಾಚಾರ ನಡೆಸಿದ್ದರು. ನಾಲ್ವರು ಬಾಲಕಿಯನ್ನು ಕಟ್ಟಿಹಾಕಿ ಸರದಿಯಂತೆ ಅತ್ಯಾಚಾರ ಮಾಡಿದ್ದಲ್ಲದೇ ವಿರಾಮದಲ್ಲಿ ಚಹಾ ಮತ್ತು ಗುಟ್ಕಾ ಕೂಡ ಸೇವಿಸಿದ್ದರು.
 

Recent Comments

Leave Comments

footer
Top