• 15 December 2017 23:29
Jai Kannada
Jai Kannada
Blog single photo
December 04, 2017

ಆಧಾರ್ ಲಿಂಕ್ ಗಡುವು ಹತ್ತಿರ , ತಲೆಬಿಸಿಯಲ್ಲಿ ಜನತೆ 

ನವದೆಹಲಿ: ನಿಮ್ಮ ಎಲ್ಲಾ ಸೇವೆಗಳನ್ನೂ ಆಧಾರ್‌ಗೆ ಲಿಂಕ್ ಮಾಡಿ ಎಂದು ಸರ್ಕಾರ ದುಂಬಾಲು ಬಿದ್ದಿರುವುದರಿಂದ ಜನರು ಲಿಂಕ್ ಮಾಡುವ ಚಿಂತೆಯಲ್ಲೇ ಮುಳುಗಿದ್ದಾರೆ.
ಡಿಸೆಂಬರ್ 31ರ ಗಡುವನ್ನು ಕೂಡ ಇದಕ್ಕೆ ನೀಡಲಾಗಿದ್ದು, ಒಟ್ಟು 6 ಸೇವೆಗಳಿಗೆ ಜನರು ತಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕಾಗಿದೆ. ಆಧಾರ್ ಜೋಡಣೆ ಮಾಡದಿದ್ದರೆ ನಿಮ್ಮ ಸೇವೆಗಳು ಕಾಯಂ ರದ್ದಾಗುವ ಭೀತಿಯನ್ನು ಎದುರಿಸಬೇಕಾದೀತು.
 ಪ್ಯಾನ್ 
ಲಿಂಕ್ ಮಾಡುವ ಗಡುವ ಹತ್ತಿರ ಬರುತ್ತಿದ್ದು, ಈಗಲೇ ಮೈಕೊಡವಿ ಮೇಲೆದ್ದು ಲಿಂಕ್ ಮಾಡಬೇಕಾಗಿದ್ದು, ಲಿಂಕಿಂಗ್ ಪ್ರಕ್ರಿಯೆ ಹೇಗೆಂಬುದನ್ನು ನೀವು ತಿಳಿದುಕೊಳ್ಳಬೇಕು.
ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ನೀಡಿ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ,
ಬ್ಯಾಂಕ್ ಖಾತೆ
ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಬಹುದು. ಅಥವಾ ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಬಳಸಿ ಲಿಂಕ್ ಮಾಡಬಹುದು. ನಿಮ್ಮ ಆನ್‌ಲೈನ್ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ ಅಪಡೇಟ್ ಆಧಾರ್ ಲಿಂಕ್‌ಗೆ ಕ್ಲಿಕ್ ಮಾಡಿ. ಆಧಾರ್ ವಿವರ ಸಲ್ಲಿಸಿ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಕಳಿಸಿದ ಒಟಿಪಿಯನ್ನು ಎಂಟರ್ ಮಾಡಿ.
ಮ್ಯುಚ್ಯುಯಲ್ ಫಂಡ್ 
ಕ್ಯಾಮ್ಸ್ ಮತ್ತು ಕಾರ್ವಿ ಕಂಪ್ಯೂಟರ್ ಶೇರ್ ನಿಮ್ಮ ಮ್ಯೂಚುಯಲ್ ಫಂಡ್ ಖಾತೆಗೆ ಆಧಾರ್ ಲಿಂಕ್ ಮಾಡಲು ಆನ್‌ಲೈನ್ ಸೌಲಭ್ಯ ಒದಗಿಸಿದೆ.
 ವಿಮೆ ಪಾಲಿಸಿಗಳು
ನಿಮ್ಮೆ ವಿಮೆ ಪಾಲಿಸಿಗಳಿಗೆ ಆಧಾರ್  ಲಿಂಕ್ ಮಾಡಲು ವೆಬ್‌ಸೈಟ್‌ಗೆ ಲಾಗಿನ್ ಮಾಡಿ ಅಥವಾ ಗ್ರಾಹಕ ಸೇವೆ ಇಲಾಖೆ ಅಥವಾ ವಿಮಾ ಸೇವೆ ದಾರರನ್ನು ಸಂಪರ್ಕಿಸಿ.
ಪೋಸ್ಟ್ ಆಫೀಸ್ ಸ್ಕೀಮ್‌ಗಳು
ಅಂಚೆ ಕಚೇರಿ ಖಾತೆಗೆ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಉಳಿಸಬೇಕೆಂಬ ಇಚ್ಛೆಯಿದ್ದರೆ ಆಧಾರ್ ಲಿಂಕಿಂಗ್ ಕಡ್ಡಾಯ. ಇಂಡಿಯಾ ಪೋಸ್ಟ್ ವೆಬ್‌ಸೈಟ್‌ಗೆ ಲಾಗ್ ಆನ್ ಮಾಡಿ ಆಧಾರ್ ಲಿಂಕೇಜ್ ಫಾರಂ ಡೌನ್‌ಲೋಡಿ ಮಾಡಿ. ಅದನ್ನು ತುಂಬಿ ಅಂಚೆ ಕಚೇರಿಗೆ ಸಲ್ಲಿಸಿ.

ಮೊಬೈಲ್ ಸಂಖ್ಯೆ
ನಿಮ್ಮ ಮೊಬೈಲ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಹಕ ಸೇವೆಗೆ ಕರೆ ಮಾಡಿ ಆಧಾರ್ ಜೋಡಣೆಗೆ ಮನವಿ ಸಲ್ಲಿಸಿ. 
ಒಟ್ಟಿನಲ್ಲಿ ಈಗಲೇ ಲಿಂಕಿಂಗ್ ಪ್ರಕ್ರಿಯೆ ಆರಂಭಿಸುವುದು ಒಳ್ಳೆಯದು. ಡಿಸೆಂಬರ್ 31 ಹತ್ತಿರ ಬಂತೆಂದರೆ ತಲೆ ಬಿಸಿ ಜಾಸ್ತಿಯಾಗಬಹುದು.

Recent Comments

Leave Comments

footer
Top